Friday, June 26, 2026
spot_imgspot_img
spot_imgspot_img

ಪುತ್ತೂರು: ಯುವತಿಯೊಬ್ಬಳು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆ!

- Advertisement -
- Advertisement -

ಪುತ್ತೂರು: ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಬಂಧಿಕೆಯಾದ ಪೂರ್ಣಿಮ ಅವರ ಚಿಕ್ಕಮ್ಮನ ಮಗಳಾದ ಅಕ್ಷತಾ(21ವ)ರವರು ನಾಪತ್ತೆಯಾದವರು.

ಅಕ್ಷತಾ ಅವರು ಸಂಬಂಧಿಕೆ ಪೂರ್ಣಿಮಾ ಎಂಬವರ ದರ್ಬೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಎ.22ರಂದು ಬೆಳಿಗ್ಗೆ ಪೂರ್ಣಿಮ ಮತ್ತು ಅವರ ಪತಿ ಲೋಕೇಶ್ ಅವರು ತಮ್ಮ ಮಗುವನ್ನು ಅಕ್ಷತಾ ಅವರಲ್ಲಿ ನೋಡಲು ಹೇಳಿ ಕೆಲಸಕ್ಕೆ ಹೋಗಿದ್ದು, ಈ ವೇಳೆ ಅಕ್ಷತಾ ಅವರು ಮಗುವನ್ನು ಮನೆಯಲ್ಲಿ ಬಿಟ್ಟು ಪಕ್ಕದ ಮನೆಯವರಲ್ಲಿ ಅಂಗಡಿಗೆ ಹೋಗಿ ಬರುವುದೆಂದು ಹೇಳಿ ನಾಪತ್ತೆಯಾಗಿದ್ದಾರೆ. ಈ ಕುರಿತು ಸಂಬಂಧಿಕೆ ಪೂರ್ಣಿಮ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!