Tuesday, April 30, 2024
spot_imgspot_img
spot_imgspot_img

ರಾಷ್ಟೀಯ ಪೊಲೀಸ್ ಅಕಾಡೆಮಿ ಅಧ್ಯಾಪನ ಕೊಠಡಿಗೆ ದಿ.ಮಧುಕರ್ ಶೆಟ್ಟಿ ಹೆಸರು

- Advertisement -G L Acharya panikkar
- Advertisement -

ಹೈದರಾಬಾದ್​: ಸರ್ದಾರ್​ ವಲ್ಲಭಬಾಯಿ ನ್ಯಾಷನಲ್ ಪೊಲೀಸ್ ಅಕಾಡೆಮಿಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರನ್ನಿಡಲಾಗಿದೆ.

ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆಗೆ ಸಮರ್ಪಣಾ ಮನೋಭಾವ ಕಂಡು ಅಕಾಡೆಮಿಯ ಲೆಕ್ಚರ್ ಹಾಲ್​​ಗೆ ಅವರ ಹೆಸರಿಟ್ಟಿದ್ದಾರೆ.‌ ಈ ಮೂಲಕ ಮಧುಕರ್ ಶೆಟ್ಟಿ ಪೊಲೀಸ್ ತರಬೇತಿ ಪಡೆಯುವ ಐಪಿಎಸ್ ಅಧಿಕಾರಿಗಳಿಗೆ ಸ್ಫೂರ್ತಿಯಾಗಲಿದ್ದಾರೆ.

2018ರ ಡಿ.29 ರಂದು ಡಾ.ಮಧುಕರ್ ಶೆಟ್ಟಿ ಹೈದರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಹೆಚ್1ಎನ್1 ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಈ ಬಗ್ಗೆ ಮಧುಕರ್ ಪತ್ನಿ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತು ಸರ್ಕಾರ ಮನವಿ ಸ್ವೀಕರಿಸಿ, ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ತಜ್ಞ ವೈದ್ಯರನ್ನ ಒಳಗೊಂಡ ಸಮಿತಿಯನ್ನ ರಚನೆ ಮಾಡಿತ್ತು.

ಈ ತಜ್ಞರ ಸಮಿತಿ ಹೈದರಾಬಾದ್​ಗೆ ಹೋಗಿ ತನಿಖೆ ನಡೆಸಿತ್ತು. ಸುಮಾರು 9 ತಿಂಗಳ ತನಿಖೆ ನಡೆಸಿಸ ಸಮಿತಿ ಸದ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿ ನೀಡಿ, ಮಧುಕರ್​ ಶೆಟ್ಟಿ ಹೆಚ್1ಎನ್​ನಿಂದ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದಿತ್ತು.

driving
- Advertisement -

Related news

error: Content is protected !!