- Advertisement -
- Advertisement -
ಬೆಂಗಳೂರು: ನಟಿ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಾಡೆಲ್ ವಂದನಾ ಜೈನ್ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 2019ರಲ್ಲಿ ಕ್ಲಬ್ ಒಂದಕ್ಕೆ ವಂದನಾ ಜೈನ್ ತನ್ನ ಸ್ನೇಹಿತನೊಂದಿಗೆ ಆಗಮಿಸಿದ್ದರು. ಅದೇ ವೇಳೆ ಕ್ಲಬ್ನಲ್ಲಿದ್ದ ನಟಿ ಸಂಜನಾ ಗಲ್ರಾನಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ನಡೆಸಿದರು.
ಹೀಗೆ ಮಾತನಾಡುತ್ತಿರುವಾಗ ವಂದನಾ ಜೈನ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಸಂಜನಾ ನೀಡಿದ್ದು, ಆ ವೇಳೆ ವಂದನಾ ಅವಾಚ್ಯ ಶಬ್ದಗಳನ್ನ ಬಳಸದಂತೆ ಸೂಚಿಸಿದ್ದರು. ಇದಕ್ಕೆ ಕೋಪಿಸಿಕೊಂಡ ಸಂಜನಾ ವಂದನಾ ಮುಖಕ್ಕೆ ವಿಸ್ಕಿ ಎರಚಿ ಹಲ್ಲೆ ಮಾಡಿದ್ದಾರೆ.
ಘಟನೆಯಿಂದಾಗಿ ವಂದನಾ ಕಣ್ಣಿಗೆ ಗಾಯವಾಗಿದ್ದು, ಘಟನೆ ಬಳಿಕ ಸಂಜನಾ ಬೆದರಿಕೆ ಕೂಡ ಹಾಕಿದ್ದಳು ಎನ್ನಲಾಗಿದೆ. ಇದೀಗ ಕೋರ್ಟ್ ಸೂಚನೆಯಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
- Advertisement -