Wednesday, May 1, 2024
spot_imgspot_img
spot_imgspot_img

ಹೊತ್ತಿ ಉರಿದ ವಿಟ್ಲಾ ಪೇಟೆ

- Advertisement -G L Acharya panikkar
- Advertisement -

✍️ ರೂಪೇಶ್ ವಿಟ್ಲ

ವಿಟ್ಲ: ವಿಟ್ಲ ಪೇಟೆಯಲ್ಲಿ ಮತ್ತೆ ಬೆಂಕಿ ಅವಘಡ. ಕೇವಲ ಒಂದು-ಒಂದೂವರೆ ವರ್ಷದಲ್ಲಿ 5 ಅಂಗಡಿಗಳು ಬೆಂಕಿಗೆ ಆಹುತಿ ಆಗಿದೆ.

ಒಂದೊಂದೇ ವಿಷಯವನ್ನು ನೋಡುತ್ತಾ ಹೋದರೆ, ಕಳೆದ ವರ್ಷ ವಿಟ್ಲಾದ ಪ್ರೈವೇಟ್ ಬಸ್ ಸ್ಟಾಂಡ್ ಬಳಿ ಇರುವ ಹೆಸರಾಂತ ಸೆಲೂನ್ ಅಂಗಡಿಗೆ ಒಮ್ಮಿಂದೊಮ್ಮೆಲೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ವಿಟ್ಲದ ಜನತೆ ಇದುವರೆಗೂ ಮರೆತಿಲ್ಲ.

ದಿನ ಕಳೆದಂತೆ ಕೊರೊನ ಸಮಯದಲ್ಲಿ ವಿಟ್ಲದ ನಾಲ್ಕು ಮಾರ್ಗದಲ್ಲಿ ಇರುವ ಕರೀಂ ಎಂಬವರ ತರಕಾರಿ ಅಂಗಡಿ ರಾತ್ರೋ ರಾತ್ರಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗೆ ಆಹುತಿ ಆಗಿದ್ದು ವಿಟ್ಲದ ಜನತೆಯ ಮನಸಲ್ಲಿ ಇದುವರೆಗೂ ಮಾಸಿಲ್ಲ.

ಅದಾದ ಬಳಿಕ ಕೇವಲ 4-5 ತಿಂಗಳ ಅಂತರದಲ್ಲಿ ವಿಟ್ಲ ಪೇಟೆಯ ಸರ್ಕಾರಿ ಬಸ್ ಸ್ಟಾಂಡ್ ಬಳಿ ಇರುವ ಹಾರ್ಡ್ವೇರ್ ಶಾಪ್ ಗೆ ತಗುಲಿದ ಬೆಂಕಿಯು ಪಕ್ಕದ ಬೇಕರಿಯನ್ನು ಸುಟ್ಟು ಭಸ್ಮ ಮಾಡಿದ ಘಟನೆಯು ಇನ್ನೂ ಜನರ ಮನಸ್ಸಿನಿಂದ ಮರೆ ಮಾಚಿಲ್ಲ.

ಅಂಗಡಿ ಓಪನ್ ಮಾಡಿ ವ್ಯಾಪಾರ ಮಾಡಲು ಬಂದಿದ್ದ ಅಂಗಡಿ ಮಾಲೀಕನಿಗೆ ಬೆಳ್ಳಮ್ ಬೆಳಿಗ್ಗೆ ಕಂಡಿದ್ದು ಸುಟ್ಟು ಕರಕಾಲದ ಅಂಗಡಿ.

ಇದೇ ರೀತಿಯ ಇನ್ನೊಂದು ಅವಘಡ ವಿಟ್ಲದ ಚಂದಳಿಕೆಯಲ್ಲಿ ಮತ್ತೆ ಮರುಕಳಿಸಿತು. ವಾರದ ಮೊದಲನೇ ದಿನವಾದ ಸೋಮವಾರ ಕೆಲಸದ ಹುಮ್ಮಸ್ಸಿನಲ್ಲಿ ಗ್ಯಾರೇಜಿಗೆ ಬಂದು ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ಏಕಾ ಏಕಿಯಾಗಿ ಹಬ್ಬಿಕೊಂಡ ಬೆಂಕಿ ನೋಡುಗರ ಕಣ್ಣೆದುರಿನಲ್ಲಿಯೇ ಸಂಪೂರ್ಣ ವಾಗಿ ಹೊತ್ತಿ ಉರಿಯುತ್ತಿತ್ತು.

ಅಲ್ಲಿನ ಸ್ಥಳೀಯರು ಬೆಂಕಿ ಆರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅವರ ಪ್ರಯತ್ನ ವ್ಯರ್ಥವಾಯಿತು. ಜೊತಗೆ ಅಗ್ನಿಶಾಮಕದಳದವರ ಪ್ರಯತ್ನವೂ ವಿಫಲವಾಯಿತು. ತನ್ನ ಜೀವನದ ಅಕ್ಷಯ ದಾಸೋಹ ಕಣ್ಣೆದುರೇ ಮಣ್ಣಾದಾಗ ಆಗುವ ನೋವು ಅಷ್ಟಿಷ್ಟಲ್ಲ. ಗ್ಯಾರೇಜಿಗೆ ಬಂದ ಕಾರ್ ಗಳು, ಅಂಗಡಿಯಲ್ಲಿ ಇದ್ದ ಸಾಮಗ್ರಿಗಳು, ಹಣ, ಎಲ್ಲವೂ ಬೆಂಕಿಗೆ ಅಹುತಿಯಾದವು.

ವಿಟ್ಲ ಪೇಟೆಯಲ್ಲಿ ಪದೇ ಪದೇ ಇಂತಹ ಅವಘಡ ನಡೆ ಯುವುದೇಕೆ?

ಇದಕ್ಕೆಲ್ಲ ಮೂಲ ಕಾರಣ ಏನು ಎನ್ನುವುದು ಜನರ ಮನಸ್ಸಿನಲ್ಲಿ ಮೂಡುವ ಯಕ್ಷ ಪ್ರಶ್ನೆಯೇ ಆಗಿದೆ ಅಲ್ಲವೇ…?

ಇಂತಹ ಅವಘಡಕ್ಕೆ ಕಾರಣ ಏನೇ ಇರಲಿ, ನಮ್ಮ ಕೈಯಲ್ಲಿ ಆಗುವಷ್ಟು ಮುಂಜಾಗ್ರತೆಯನ್ನು ಮಾಡಿಕೊಳ್ಳೋಣ.

ಅಂಗಡಿ ಮುಂಗಟ್ಟುಗಳ ಹತ್ತಿರ ಧೂಮಪಾನ ಮಾಡುದನ್ನು ಕಡ್ಡಾಯವಾಗಿ ನಿಷೇದಿಸುವ. ಅಂಗಡಿಗಳಲ್ಲಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ತಕ್ಷಣ ಸಂಬಂಧ ಪಟ್ಟವರಲ್ಲಿ ಹೇಳಿ ಸರಿಪಡಿಸಿಕೊಳ್ಳೋಣ.

ಅಂಗಡಿಗಳನ್ನು ರಾತ್ರಿ ಮುಚ್ಚುವ ಸಂದರ್ಭದಲ್ಲಿ ಎಲ್ಲಾ ವಿದ್ಯುತ್ ಸ್ವಿಚ್ ಗಳನ್ನು ಸರಿಯಾಗಿ ಆಫ್ ಮಾಡಿದ್ದೇವಾ ಎಂದು ಖಾತ್ರಿಪಡಿಸಿಕೊಳ್ಳೋಣ. ನಮ್ಮ ಜಾಗರೂಕತೆಯನ್ನು ನಾವು ಮಾಡೋಣ.

✍? ರೂಪೇಶ್ ವಿಟ್ಲ

- Advertisement -

Related news

error: Content is protected !!