Friday, June 26, 2026
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಜೂಜು ಅಡ್ಡೆಗಳ ಮೇಲೆ ಪೊಲೀಸರಿಂದ ದಾಳಿ: 11 ಮಂದಿ ವಶಕ್ಕೆ!

- Advertisement -
- Advertisement -

ಬಂಟ್ವಾಳ: ನೈನಾಡು ಸ್ನೇಹಗಿರಿಯ ಸರಕಾರಿ ಗೇರು ಮರದ ಹಾಡಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿಕೊಂಡಿದ್ದು, ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸ್‌ ಠಾಣಾ ಪಿಎಸ್‌ಐ ಸೌಮ್ಯ ಜೆ ರವರು ಸಿಬ್ಬಂದಿಗಳೊಂದಿಗೆ ಕೋವಿಡ್‌ ಲಾಕ್ ಡೌನ್ ಕರ್ತವ್ಯ ನಿರ್ವಹಣೆ ವೇಳೆ ತಾಲ್ಲೂಕು ನೈನಾಡು ಸ್ನೇಹಗಿರಿಯ ಸರಕಾರಿ ಗೇರು ಮರದ ಹಾಡಿಯಲ್ಲಿ ಜೂಜಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸ್‌ಐ ಸೌಮ್ಯ ಜೆ ಹಾಗೂ ಸಿಬ್ಬಂದಿ ಅದೇ ಗ್ರಾಮದ 11 ಮಂದಿಯನ್ನು ಬಂಧಿಸಿದ್ದು, ಜೊತೆಗೆ ಅಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಕೋವಿಡ್‌-19 ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗುಂಪುಗೂಡಿಕೊಂಡು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿಸಿಕೊಂಡ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

driving
- Advertisement -

Related news

error: Content is protected !!