Friday, September 4, 2026
spot_imgspot_img
spot_imgspot_img

ಮಂಗಳೂರು: ಕೋವಿಡ್ ನಿಯಮ ಉಲ್ಲಂಘಿಸಿದ ಖ್ಯಾತ ವೈದ್ಯ!

- Advertisement -
- Advertisement -

ಮಂಗಳೂರು: ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ ವೈದ್ಯರೊಬ್ಬರನ್ನು ಸೂಪರ್ ಮಾರ್ಕೆಟ್ ಸಿಬ್ಬಂದಿಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ 8.45 ರ ಸುಮಾರಿಗೆ ಸೂಪರ್‌ ಮಾರ್ಕೆಟ್‌ಗೆ ಬಂದ ಡಾ.ಶ್ರೀನಿವಾಸ್ ಕಕ್ಕಿಲಯ ಎಂಬ ವೈದ್ಯ, ಫೋನಿನಲ್ಲಿ ಮಾತಾಡುತ್ತಿದ್ದು ಮಾಸ್ಕ್ ಹಾಕದೆ ಬಿಲ್ ಕೌಂಟರ್ ಬಳಿ ನಿಂತಿದ್ದರು. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಯೊಬ್ಬರು ವೈದ್ಯನಿಗೆ ಕೋವಿಡ್ ನಿಯಮದ ಬಗ್ಗೆ ಪಾಠ ಮಾಡಿದ್ದಾರೆ.

driving

ದಯವಿಟ್ಟು ಮಾಸ್ಕ್ ಧರಿಸಿ, ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರುವುದು ಎಂದಿದ್ದಾನೆ. ಇದಕ್ಕೆ ವೈದ್ಯ ಮತ್ತೆ ವಾಗ್ವಾದಕ್ಕೆ ಇಳಿದು, ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಕುರಿತು ವೈದ್ಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!