Friday, October 16, 2026
spot_imgspot_img
spot_imgspot_img

ಉಡುಪಿ: ಪೋಷಕರು ನಿಂದಿಸಿದರೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ !

- Advertisement -
- Advertisement -

ಉಡುಪಿ: 16 ವರ್ಷದ ಬಾಲಕಿಯೊಬ್ಬಳು ಆಕೆ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಗೇಮ್‌ಗಳನ್ನು ಆಡಿದ್ದಕ್ಕಾಗಿ ಪೋಷಕರು ನಿಂದಿಸಿದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಮಣಿಪುರ ಕೋಟೆಯಲ್ಲಿ ನಡೆದಿದೆ.

ಮೃತಳನ್ನು ಜುಬೇರಾ ಹಾಗೂ ಶಬಾನು ಅವರ ಪುತ್ರಿ ಸುಹೀಬತ್ ಅಸ್ಲಮಿಯಾ ಎಂದು ಗುರುತಿಸಲಾಗಿದೆ. ಆಕೆಯ ತಂದೆ ನೀಡಿದ್ದ ದೂರಿನನ್ವಯ ಬಾಲಕಿ ನಿರಂತರವಾಗಿ ಮೊಬೈಲ್ ಫೋನ್‌ನಲ್ಲಿ ಗೇಮ್ ಆಡುವುದರಲ್ಲಿ ತಲ್ಲೀನಳಾಗಿರುತ್ತಿದ್ದಳು. ಹಾಗೆ ಮಾಡಬೇಡ ಎಂದರೂ ಕೇಳುತ್ತಿರಲಿಲ್ಲ.

ಮೇ 15 ರ ಸಂಜೆ ಬಾಲಕಿಗೆ ಜುಬೇದಾ ಹಾಗೂ ಆತನ ಪತ್ನಿ ಮೊಬೈಲ್‌ನಲ್ಲಿ ಆಟವಾಡುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದರು ಮತ್ತು ಅವಳಿಂದ ಮೊಬೈಲ್ ನ್ನು ಕಸಿದುಕೊಂಡಿದ್ದಾರೆ. ಅದಾದ ಬಳಿಕ ಬಾಲಕಿ ಮನೆಯ ಒಂದು ಮೂಲೆಯಲ್ಲಿ ಕುಳಿತಿದ್ದಳು.

ಆಗ ತಾಯಿ ನಮಾಜ್ ಮಾಡಲು ಹೋದರೆ ತಂದೆ ಸ್ನಾನಕ್ಕೆ ತೆರಳಿದ್ದರು. ನಮಾಜ್ ಬಳಿಕ ತಾಯಿ ಬಂದು ಗಮನಿಸಿದಾಗ ಮಗಳು ಅಲ್ಲಿರಲಿಲ್ಲ. ಅವಳನ್ನು ಹುಡುಕತೊಡಗಿದಾಗ ತಮ್ಮ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಸರ್ಕಾರಿ ಬಾವಿಯ ಸಮೀಪ ಜನ ಸೇರಿರುವುದನ್ನು ಕಂಡಿದ್ದಾರೆ. ಆ ವೇಳೆ ಅವರಿಗೆ ತಮ್ಮ ಮಗಳು ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾಳೆ ಎನ್ನುವುದು ಗೊತ್ತಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಸ್ಲಮಿಯಾಳನ್ನು ಬಾವಿಯಿಂದ ಎತ್ತುವಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು. ಘಟನೆ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!