Tuesday, July 28, 2026
spot_imgspot_img
spot_imgspot_img

ವಿಟ್ಲ: ಎಸ್.ಡಿ.ಪಿ.ಐ ಪರ್ತಿಪ್ಪಾಡಿ ವಲಯದ ವತಿಯಿಂದ ಜನಾಗ್ರಹ ಆಂದೋಲನ ಪ್ರತಿಭಟನೆಯ ಅಂಗವಾಗಿ ಹಕ್ಕೊತ್ತಾಯ ಸಭೆ

- Advertisement -
- Advertisement -

ವಿಟ್ಲ: ನಾವೂ ಬದುಕ ಬೇಕು ‘WE SHOULD ALSO LIVE’ ಎಂಬ ಘೋಷಣೆಯೊಂದಿಗೆ ನಿನ್ನೆ ರಾಜ್ಯಾದ್ಯಂತ ನಡೆಯುತ್ತಿರುವ ಜನಾಗ್ರಹ ಆಂದೋಲನ ಪ್ರತಿಭಟನೆಯ ಅಂಗವಾಗಿ ಎಸ್.ಡಿ.ಪಿ.ಐ ವತಿಯಿಂದ ವಿಟ್ಲ ಸುತ್ತಮುತ್ತಲಿನಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.

ಪರ್ತಿಪಾಡಿ ವಲಯದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಎಸ್.ಡಿ.ಪಿ.ಐ ಪರ್ತಿಪ್ಪಾಡಿ ಘಟಕದ ಅಧ್ಯಕ್ಷರಾದ ರಫೀಕ್ ಪಿ, ವಿಟ್ಲ ಪಡ್ನೂರು ವಲಯ ಸಮೀತಿ ಕಾರ್ಯದರ್ಶಿ ಗಳಾದ ಸಿದ್ದೀಕ್ ಕೆ ಎಂ , ಪಕ್ಷದ ಮುಖಂಡರಾದ ಸಯ್ಯದ್ ಅಲಿ ಪರ್ತಿಪ್ಪಾಡಿ, ಪಿಎಫ್ಐ ಯೂನಿಟ್ ಕಾರ್ಯದರ್ಶಿಗಳಾದ ಇಶಾಕ್ ಪರ್ತಿಪ್ಪಾಡಿ ಹಾಗೂ ಕಾರ್ಯಕರ್ತರು ಭಾಗವಹಿದ್ದರು.

ಕಾರ್ಯಕ್ರಮದಲ್ಲಿ ಊಟದ ತಟ್ಟೆ ಹಾಗೂ ಖಾಲಿ ಚೀಲಗಳನ್ನು ಪ್ರದರ್ಶಿಸಿ, ಘೋಷಣೆ ಕೂಗುವ ಮೂಲಕ ಆಡಳಿತ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಲಾಯಿತು.

ಅದೇ ರೀತಿ ಮೇಗಿನಪೇಟೆ, ಸಾಲೆತ್ತೂರು, ಪರಿಯಾಲ್ತಡ್ಕ, ಕಂಬಳಬೆಟ್ಟು ಕಡೆಗಳಲ್ಲಿ ಏಕಕಾಲದಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.

driving
- Advertisement -

Related news

error: Content is protected !!