Tuesday, June 16, 2026
spot_imgspot_img
spot_imgspot_img

ಬೆಳ್ತಂಗಡಿ: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ- ಪೊಲೀಸರಿಂದ ದಾಳಿ; ಮದ್ಯದ ಬಾಟಲಿ, ನಗದು ವಶಕ್ಕೆ

- Advertisement -
- Advertisement -

ಬೆಳ್ತಂಗಡಿ: ಮನೆಯಲ್ಲಿ‌ ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಇರಿಸಿದ್ದ ಮದ್ಯದ ಬಾಟಲಿಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಸಂಭವಿಸಿದೆ.

ಗರ್ಡಾಡಿ ಗ್ರಾಮದ ಕಾಣೇಲು ಭೋಜ ಪೂಜಾರಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯವನ್ನು ದಾಸ್ತಾನು ಇಡಲಾಗಿತ್ತು.

ಪುಂಜಾಲಕಟ್ಟೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಪುಂಜಾಲಕಟ್ಟೆ ಪಿಎಸ್ಐ ಸೌಮ್ಯ ಮತ್ತು ಸಿಬ್ಬಂದಿಗಳು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕಾಣೇಲು ನಿವಾಸಿ ಭೋಜ ಎಂಬವರ ಮನೆಗೆ ದಾಳಿ ನಡೆಸಿದ್ದಾರೆ.

ಈ ವೇಳೆ ವಿವಿಧ ನಮೂನೆಯ ರೂ. 42,356/- ಮೌಲ್ಯದ 58.68 ಲೀಟರ್ ಮದ್ಯ ಹಾಗೂ 82.53 ಲೀಟರ್ ಬಿಯರ್ ಗಳನ್ನು ಹಾಗು ನಗದು ರೂ.14,125/- ನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!