Wednesday, July 22, 2026
spot_imgspot_img
spot_imgspot_img

ಧಾರ್ಮಿಕ ಸೇವಾ ಸಮಿತಿ ಪಂಜಿ ಮೊಗರು ವತಿಯಿಂದ 40 ಕುಟುಂಬಗಳಿಗೆ ಕಿಟ್ ವಿತರಣೆ

- Advertisement -
- Advertisement -

ಸುಳ್ಯ: ಧಾರ್ಮಿಕ ಸೇವಾ ಸಮಿತಿ ಪಂಜಿ ಮೊಗರು ಇದರ ವತಿಯಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು. ಕೂಳೂರು ಬೀಡಿನ ಪರಿಸರದಲ್ಲಿ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ತೊಂದರೆಗೆ ಒಳಗಾದ ಸುಮಾರು 40 ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಕೋಶಾಧಿಕಾರಿಗಳಾದ ಭಾಸ್ಕರ್ ಕೋಟ್ಯಾನ್, ವಿವೇಕಾನಂದ ಸುವರ್ಣ, ಸದಸ್ಯರುಗಳಾದ ಲೋಕೇಶ ಕೋಟ್ಯಾನ್, ಚಂದ್ರಹಾಸ ಸುವರ್ಣ, ಗಿರಿಧರ ಸುವರ್ಣ, ಶಶಿಧರ್ ಶೆಟ್ಟಿ, ಮಧುರಾಜ್ ಶೆಟ್ಟಿ, ಪದ್ಮನಾಭ ಸುವರ್ಣ, ನವೀನ್ ಶೆಟ್ಟಿ, ವಿಶ್ವನಾಥ್ ಕೈರಂಗಳ, ಸುಕುಮಾರ್ ಸುವರ್ಣ ಉಪಸ್ಥಿತರಿದರು.

- Advertisement -

Related news

error: Content is protected !!