Tuesday, August 4, 2026
spot_imgspot_img
spot_imgspot_img

ಎಲ್​ಪಿಜಿ ಗ್ಯಾಸ್ ಗ್ರಾಹಕರಿಗೆ ಗುಡ್​ನ್ಯೂಸ್: ರೀಫಿಲ್ ಮಾಡಿಸಿಕೊಳ್ಳಲು ಇನ್ನು ಮುಂದೆ ಇರಲ್ಲ ಪರದಾಟ

- Advertisement -
- Advertisement -

ನವದೆಹಲಿ: ಇನ್ನು ಮುಂದೆ ಜನರು ತಮ್ಮ ಎಲ್​ಪಿಜಿ ಗ್ಯಾಸ್​ಗಳನ್ನು ಯಾವುದೇ ಎಲ್​ಪಿಜಿ ಏಜೆನ್ಸಿಯಿಂದ ರೀಫಿಲ್ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಒಂದು ಗ್ಯಾಸ್ ಡಿಸ್ಟ್ರಿಬ್ಯೂಟರ್​ನಿಂದ ರೀಫಿಲ್ ಮಾಡಿಸಿಕೊಳ್ಳಲು ನಿಮಗೆ ಸಮಸ್ಯೆಯಿದ್ದಲ್ಲಿ ಅಥವಾ ಅವರು ನಿಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಾದಲ್ಲಿ ನೀವು ಬೇರೊಂದು ಡಿಸ್ಟ್ರಿಬ್ಯೂಟರ್​ನಿಂದ ಎಲ್​ಪಿಜಿ ಗ್ಯಾಸ್ ರೀಫಿಲ್ ಮಾಡಿಸಿಕೊಳ್ಳಬಹುದಾಗಿದೆ.

ಬಹಳ ಹಿಂದಿನಿಂದಲೂ ಈ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಸದ್ಯ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ಗ್ರಾಹಕರು ತಾವು ಯಾವ ಡಿಸ್ಟ್ರಿಬ್ಯೂಟರ್​ನಿಂದ ಗ್ಯಾಸ್ ರೀಫಿಲ್​ ಮಾಡಿಸಿಕೊಳ್ಳಬೇಕೆಂದು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ.

ಪ್ರಾರಂಭಿಕ ಹಂತದಲ್ಲಿ ಚಂಡೀಘಡ, ಕೊಯಂಬತ್ತೂರ್, ಗುರ್​ಗಾಂವ್, ಪುಣೆ ಮತ್ತು ರಾಂಚಿಯಲ್ಲಿ ಈ ಯೋಜನೆಯನ್ನ ಜಾರಿಗೆ ತರಲಾಗ್ತಿದೆ.

ಇನ್ನು ಮುಂದೆ ಗ್ರಾಹಕರು ಮೊಬೈಲ್ ಆ್ಯಪ್ ಅಥವಾ ಕಸ್ಟಮರ್ ಪೋರ್ಟಲ್​ನಲ್ಲಿ ಗ್ಯಾಸ್ ರೀಫಿಲ್​ಗೆ ಲಾಗಿನ್ ಮಾಡಿದಾಗ ಅವರಿಗೆ ಡೆಲಿವರಿ ಡಿಸ್ಟ್ರಿಬ್ಯೂಟರ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಜೊತೆಗೆ ಅವುಗಳ ಸೇವೆಗೆ ತಕ್ಕಂತೆ ರೇಟಿಂಗ್​ ಕೂಡ ಕಾಣಿಸಲಿದೆ.

ಇದನ್ನ ಆಧರಿಸಿ ತಮಗೆ ಬೇಕಾದ ಡಿಸ್ಟ್ರಿಬ್ಯೂಟರ್​ನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಡಿಸ್ಟ್ರಿಬ್ಯೂಟರ್​ಗಳೂ ಸಹ ತಮ್ಮ ಸೇವೆಯನ್ನ ಮತ್ತಷ್ಟು ಸುಧಾರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!