Saturday, June 27, 2026
spot_imgspot_img
spot_imgspot_img

ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಬಂಧನ!

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಕೊಡಿಯಾಲ್ ಬೈಲ್ ನಿವಾಸಿಯ ಮಹಿಳೆಯೊಬ್ಬರು ಭದ್ರಾವತಿಗೆ ತೆರಳಿ ವಾಹನದಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಮೂಲದ ಜ್ಞಾನರತ್ನಂ ಕೃಪಾರಾವ್(45) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಮಾರ್ಚ್ 10 ರಂದು ಮೌರಿಷ್ಕ ಪರ್ಕ್ ನಿವಾಸಿಯಾಗಿರುವ ಮಹಿಳೆ ವಸಂತ ಎಂಬುವವರು ಭದ್ರಾವತಿಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಚಿನ್ನವನ್ನು ಕಳೆದುಕೊಂಡಿದ್ದರ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಕದ್ರಿ ಪೊಲೀಸರು ಮೂರು ತಿಂಗಳ ಬಳಿಕ ಆರೋಪಿಯನ್ನು ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬಂಧಿಸಿದ್ದು, ಆರೋಪಿಯಿಂದ 2.5 ಮೌಲ್ಯದ 53 ಗ್ರಾಂ ಚಿನ್ನವನ್ನು ದಾಂಡೇಲಿ ಮಣಪ್ಪುರಂ ಫೈನಾನ್ಸ್ ಹುಬ್ಬಳ್ಳಿಯ ಮುತ್ತೂಟ್ ಫೈನಾನ್ಸ್ ಮತ್ತು ಭದ್ರಾವತಿಯ ಐ ಐ ಎಫ್ ಫೈನಾನ್ಸ್ ನಲ್ಲಿ ಅಡವಿರಿಸಿ ಹಣ ಪಡೆದಿದ್ದ ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!