Tuesday, June 23, 2026
spot_imgspot_img
spot_imgspot_img

ಪಡುಬಿದ್ರಿ: ಬೈಕ್ ಅಪಘಾತದಲ್ಲಿ ಪಶ್ಚಿಮ ಬಂಗಾಳದ ಯುವಕ ದಾರುಣ ಸಾವು!

- Advertisement -
- Advertisement -

ಪಡುಬಿದ್ರಿ: ಪಶ್ಚಿಮ ಬಂಗಾಳದ ಯುವಕನೋರ್ವ ಬೈಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಡುಬಿದ್ರಿ ಕಾರ್ಕಳ ರಸ್ತೆಯ ಸುಜ್ಲಾನ್ ಕಂಪನಿಯ ಸಮೀಪ ಅಪಘಾತಕ್ಕೀಡಾಗಿ ಬಲಿಯಾಗಿದ್ದಾರೆ.

ಮೃತ ಯುವಕ ಪಶ್ಚಿಮ ಬಂಗಾಳ ನಿವಾಸಿ ಗುರುದಾಸ್(26) ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಯುಪಿಸಿಎಲ್ ಕಂಪನಿಯ ಎಲೆಕ್ಟ್ರಿಕಲ್ ಗುತ್ತಿಗೆ ಕಂಪನಿ ಹೆರಿಕಾನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಂದೆಯನ್ನು ಕಳೆದುಕೊಂಡ ಈತ ತಾಯಿಯೊಂದಿಗೆ ವಾಸವಿದ್ದನು ಈತ ಒರ್ವನೇ ಮಗ, ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಮದುವೆಯ ಸಂದರ್ಭ ರಜೆ ಹಾಕಿ ಊರಿಗೆ ತೆರಳಿದ ಕೆಲ ದಿನಗಳ ಹಿಂದೆಯಷ್ಟೇ ಪತ್ನಿಯನ್ನು ತಾಯಿಯೊಂದಿಗೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದನು.

ಈತ ಪಡುಬಿದ್ರಿ ಪೇಟೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಳೆದ ರಾತ್ರಿ 9.50ರ ಸುಮಾರಿಗೆ ತನ್ನ ಬೈಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸುಜ್ಲಾನ್ ಕಂಪನಿಯ ಬಳಿ ರಸ್ತೆ ಪಕ್ಕದ ಬಾಂಡ್ ಕಲ್ಲಿಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದ. ಅಪಘಾತದ ತೀವ್ರತೆಗೆ ಬಾಂಡ್ ಕಲ್ಲು ಮೇಲೆದ್ದು ಬಂದಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಊರಿಂದ ಸಂಬಂಧಿಗಳು ಆಗಮಿಸಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಊರಿಗೆ ಸಾಗಿಸಲಿದ್ದಾರೆ.

- Advertisement -

Related news

error: Content is protected !!