ಕೇರಳ: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋ ಮಾತು ಸುಮ್ನೆ ಅಲ್ಲ. ಒಮ್ಮೆ ಏನಾದ್ರೂ ಮಾಡ್ಬೇಕು ಅನ್ನೋ ಛಲ ಇಟ್ಕೊಂಡ್ರೆ ಅದನ್ನ ಮಾಡಿ ಮುಗಿಸಿಯೇ ಬಿಡ್ತಾರೆ. ಇದಕ್ಕೆ ಬೇಕಾದಷ್ಟು ಉದಾಹರಣೆ ಇವೆ. ಕೇರಳದ 21 ವರ್ಷದ ಈ ಯುವತಿಯ ಸಾಧನೆ ಹಲವರಿಗೆ ಸ್ಫೂರ್ತಿ.

ಲೆಮನ್ ಜ್ಯೂಸ್ ಮಾರುತ್ತಿದ್ದ ಯುವತಿ ಎಸ್ಪಿ ಆಗಿದ್ದು ಹೇಗೆ?
ತಿರುವನಂತಪುರಂನ ಎಸ್ಪಿ ಆ್ಯನಿ ಜೀವನಾಗಾಥೆ ತುಂಬಾ ಇಂಟ್ರೆಸ್ಟಿಂಗ್. ಅವ್ರಿಗೆ ತುಂಬಾ ಚಿಕ್ಕ ವಯಸ್ಸಿನವರಿದ್ದಾಗಲೇ ಮದುವೆ ಆಗಿತ್ತು, 21ವರ್ಷದೊಳಗೆ ತನ್ನ ಗಂಡನಿಂದ ದೂರವಾಗಿ, ತಮ್ಮ ಅಜ್ಜಿಯ ಮನೆಯಲ್ಲಿ ವಾಸ ಮಾಡ್ತಾಯಿದ್ರು. ಅಜ್ಜಿ ಮನೆಯಲ್ಲಿ ವಾಸವಿದ್ದ ಆ್ಯನಿ ಜೀವನ ನಿರ್ವಹಣೆಗಾಗಿ ಮನೆಮನೆಗೂ ಹೋಗಿ ನಿಂಬೆ ಜ್ಯೂಸ್ ಮಾರಾಟ ಹಾಗೂ ದೊಡ್ಡ ದೊಡ್ಡ ಆಟದ ಮೈದಾನದಲ್ಲಿ ಐಸ್ಕ್ರೀಮ್ ಮಾರಾಟ ಮಾಡ್ತ ಜೀವನ ನಡೆಸುತ್ತಿದ್ದರು. ಇದೇ ಯುವತಿ 31 ವರ್ಷಕ್ಕೆ ತನ್ನ ಕನಸ್ಸನ್ನ ಸಾಧಿಸಬೇಕು ಅನ್ನೋ ಹಠ ಹಿಡಿದು, ಈಗ ಕೇರಳಾದ ವೆರಕಾಲ್ ಪೊಲೀಸ್ ಠಾಣೆಯಲ್ಲಿ ಎಸ್ಪಿ ಆಗಿದ್ದಾರೆ.

ತನ್ನ ಅಜ್ಜಿನ ಮನೆಯಲ್ಲಿದ್ದಾಗ, ಅವ್ರು ಓದೋ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಮಾಡಿಕೊಂಡಿರ್ಲಿಲ್ಲ. ದೂರ ಶಿಕ್ಷಣ ಮಾಡಿಕೊಂಡು, ಓದನ್ನ ಮುಗಿಸಿಕೊಂಡ್ರು. ಮದುವೆಯಾಗಿ ಒಂದು ಮಗುವಿರೋ ಆ್ಯನಿ, ತಮ್ಮ ಮಗುವಿನ ಜೊತೆಗೆ ಒಂದು ಸಿಂಗಲ್ ರೂಂ ಮನೆ ಹುಡುಕೋದಕ್ಕು ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ನಂತರದಲ್ಲಿ 2016ರಲ್ಲಿ ಸಬ್ ಇನ್ಸ್ಪೆಕ್ಟರ್ ಎಕ್ಸಾಂ ತೆಗೆದುಕೊಂಡ್ರು, ಲೋನ್ ಮಾಡಿಕೊಂಡು ಎಕ್ಸಾಂಗೆ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡು, ಎಕ್ಸಾಂ ಬರೆದು ಕ್ಲಿಯರ್ ಮಾಡಿದ್ದಾರೆ. ನಂತರ, ಒಂದೂವರೆ ವರ್ಷದ ನಂತರ ಟ್ರೈನಿಂಗ್ ಮುಗಿಸಿ ಕೇರಳದ ವರ್ಕಾಲಾ ಎಸ್ಪಿಯಾಗಿದ್ದಾರೆ.










