Tuesday, July 21, 2026
spot_imgspot_img
spot_imgspot_img

ವಿಟ್ಲ: ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ

- Advertisement -
- Advertisement -

ವಿಟ್ಲ: ಕಾಲೇಜು ಆರಂಭಕ್ಕೆ ಅನುಮತಿ ಸಿಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಬಂಟ್ವಾಳದ ಹಲವು ಕಾಲೇಜುಗಳಿಗೆ ಲಸಿಕೆ ಬಂದಿದ್ದು ವ್ಯಾಕ್ಸಿನೇಶನ್ ಪ್ರಾರಂಭವಾಗಿದೆ.

ವಿಟ್ಲದ ವಿಠಲ ಸುಪ್ರಜಿತ್ ಐಟಿಐ, ಸರಕಾರಿ ಪದವಿ ಕಾಲೇಜು ಮತ್ತು ಸರಕಾರಿ ಐಟಿಐ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು.

ವಿಟ್ಲ ಸಮುದಾಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ| ನಿಶ್ಮಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಇವರ ನೇತೃತ್ವದಲ್ಲಿ ಲಸಿಕೆ ನೀಡಲಾಯಿತು. ಆರೋಗ್ಯ ಸಹಾಯಕಿಯರು ಸಹಕರಿಸಿದರು.

- Advertisement -

Related news

error: Content is protected !!