Friday, September 4, 2026
spot_imgspot_img
spot_imgspot_img

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎನ್ ಎಸ್ ಯುಐ ವತಿಯಿಂದ ತಹಶೀಲ್ದಾರರಿಗೆ, ಡಿಪೋ ಮ್ಯಾನೇಜರ್ ಗೆ ಮನವಿ!

- Advertisement -
- Advertisement -

ಸುಳ್ಯ: ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುವ ದಿನದಂದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂದು ಸುಳ್ಯ ತಹಶೀಲ್ದಾರರಿಗೆ ಹಾಗೂ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ 19 ಹಿನ್ನಲೆಯಲ್ಲಿ ಸುಳ್ಯದ ಗ್ರಾಮೀಣ ಭಾಗದಲ್ಲಿ ಕೆ ಎಸ್ ರ್ ಟಿ ಸಿ ಬಸ್ ಸಂಚಾರ ಕೆಲವು ನಿಗದಿತ ಸಮಯಕ್ಕೆ ಮಾತ್ರ ಸಂಚರಿಸುತ್ತಿದ್ದು ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ಆಗುವ ತೊಂದರೆಯನ್ನು ಮನಗಂಡು ಪರೀಕ್ಷಾ ದಿನದಂದು ಸಮಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಳ್ಯ ಗ್ರಾಮೀಣ ಭಾಗಗಳಿಂದ ಕೆ ಎಸ್ ರ್ ಟಿ ಸಿ ಬಸ್ ವ್ಯವಸ್ಥೆ ಮಾಡುವಂತೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಮುಖಂಡರುಗಳಾದ ರಂಜಿತ್ ರೈ ಮೇನಾಲ, ವಿಷ್ಣುರಾಜ್ ಅಜ್ಜಾವರ, ಶಹಾಲ್ ಕೆ.ಎಸ್ ಉಪಸ್ಥಿತರಿದ್ದರು.

driving

- Advertisement -

Related news

error: Content is protected !!