Tuesday, September 1, 2026
spot_imgspot_img
spot_imgspot_img

ಶಾಸಕ ಜಮೀರ್ ಅಹಮ್ಮದ್ ಹೆಸರಲ್ಲಿ ಐಶಾರಾಮಿ ಕಾರು ಕಳ್ಳತನ!

- Advertisement -
- Advertisement -

ಶಾಸಕ ಜಮೀರ್ ಅಹಮ್ಮದ್ ಹೆಸರು ಬಳಸಿಕೊಂಡು ಐಶಾರಾಮಿ ಕಾರುಗಳನ್ನು ಕದಿಯುತ್ತಿದ್ದ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ನಸೀಬ್, ಮೊಹಮ್ಮದ್ ಆಜಂ. ಬಂಧಿತರಲ್ಲಿ ಆರೋಪಿ ನಸೀಬ್ ನ ಪತ್ನಿ ಐಸಿಐಸಿಐ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದು, ಮತ್ತೊರ್ವ ಆರೋಪಿ ಆಜಂ ಸೌದಿ ರಿಟರ್ನ್ ಎಂದು ತಿಳಿದು ಬಂದಿದೆ.

ಈ ಖತರ್ನಾಕ್ ಕಳ್ಳರು, ಶಾಸಕ ಜಮೀರ್ ಅಹಮ್ಮದ್ ಅವರ ಬಳಿ ಪಾಸ್ ಬಳಸಿಕೊಂಡು ತಮ್ಮ ಫಾರ್ಚೂನರ್ ಕಾರಿಗೆ ಶಾಸಕರ ಪಾಸ್ ಅಂಟಿಸಿಕೊಂಡು ತಿರುಗಾಡಿಕೊಂಡಿದ್ದರು. ಆರೋಪಿಗಳು ಜಮೀರ್ ಅಪ್ತರೆಂದು ಹೇಳಿಕೊಂಡು ಮೂರು ಪ್ರಭಾವಿ ವ್ಯಕ್ತಿಗಳ ಕಾರನ್ನು ಕದ್ದು ಮಾರಾಟ ಮಾಡಿದಲ್ಲದೇ ತಾವು ಜಮೀರ್ ಅವರ ಆಪ್ತರು ಎಂದು ಹೇಳಿಕೊಂಡು ಹತ್ತಾರು ಮಂದಿಗೆ ಮೋಸ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಆರೋಪಿಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

driving
- Advertisement -

Related news

error: Content is protected !!