

ಗುಂಟೂರು: ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಗ್ರಾಮದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಗಳನ್ನು ರಾಮಮೂರ್ತಿ, ಕಿರಣ್, ಮನೋಜ್, ವಂಡಬೋ, ಮಹೇಂದ್ರ, ಒಡಿಶಾ ನಿವಾಸಿ ನವೀನ್ ಎನ್ನಲಾಗಿದೆ.

ಮನೆಯಲ್ಲಿ ರಾತ್ರಿ ವೇಳೆ ಎಲ್ಲರೂ ಮಲಗಿದ್ದ ವೇಳೆ ಕರೆಂಟ್ ತಂತಿ ಶೆಡ್ ಮೇಲೆ ಬಿದ್ದು ಈ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಶಾರ್ಟ್ ಸರ್ಕ್ಯೂಟ್ ಆದ ಬಗ್ಗೆ ಯಾವುದೇ ಕುರುಹು ಇಲ್ಲದಿರುವುದರಿಂದ ಇದು ಕರೆಂಟ್ ತಂತಿ ಬಿದ್ದಿರುವ ಕಾರಣದಿಂದಲ್ಲ ಎಂದು ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ತಂಗಿಯ ಆಭರಣಗಳನ್ನು ಕಳವು ಮಾಡಿ ಪ್ರಿಯಕರನೊಂದಿಗೆ ಪರಾರಿಯಾದ ವಿವಾಹಿತೆ ಅಕ್ಕ!
ಶೆಡ್ ನಲ್ಲಿರುವ ರಸಾಯನಿಕದಿಂದ ಮನೆ ಮೇಲೆ ಬೆಂಕಿ ತಗುಲಿ ಈ ಘಟನೆ ನಡೆದಿರಬಹುದು ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.











