Sunday, June 28, 2026
spot_imgspot_img
spot_imgspot_img

ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿಯ ಅಪಹರಣ; ಮೂವರ ಬಂಧನ

- Advertisement -
- Advertisement -

ಬೆಂಗಳೂರು: ಹಣಕ್ಕಾಗಿ ಉದ್ಯಮಿಯನ್ನ ಅಪಹರಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಹಲಸೂರು ಪೊಲೀಸರು ಅಪಹರಣ ಮಾಡಿದ ನದೀಮ್ ಶರೀಫ್, ಸಂತೋಷ್, ಅಜರ್ ಎಂಬುವವರನ್ನು ಬಂಧಿಸಿದ್ದಾರೆ.

ಜುಲೈ 7ರಂದು ಉದ್ಯಮಿ ದಿವಾಕರ್ ರೆಡ್ಡಿಯನ್ನು ಅಪಹರಿಸಿದ್ದರು. ಪೊಲೀಸರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಚಿನ್ನದ ವ್ಯಾಪಾರದಲ್ಲಿ ಅವ್ಯವಹಾರ ಮಾಡಿದ್ದೀರಾ ಎಂದು ಬೆದರಿಕೆ ಒಡ್ಡಿದ್ದಾರೆ. ಆ ಬಳಿಕ ಕೋರಮಂಗಲದ ರೂಂನಲ್ಲಿಟ್ಟು 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ದಿವಾಕರ್ ಸ್ನೇಹಿತ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!