ಹಳೆಯ ನಾಣ್ಯಗಳು ಹಾಗೂ ನೋಟುಗಳಿಗೆ ಆನ್ಲೈನ್ ಮಾರ್ಕೆಟ್ನಲ್ಲಿ ಭಾರೀ ಡಿಮ್ಯಾಂಡ್ ಇದೆ. ಹಲವರು ಭಾರೀ ಪ್ರಮಾಣದ ಹಣ ಕೊಟ್ಟು ಹಳೆ ಕಾಲದ ನಾಣ್ಯಗಳನ್ನು ಖರೀದಿ ಮಾಡಲು ಮುಂದೇ ಬರುತ್ತಿದ್ದಾರೆ. ಇತ್ತೀಚೆಗೆ 1 ರೂಪಾಯಿ ನಾಣ್ಯ ಹರಾಜಿನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಒಂದು ರೂಪಾಯಿ ನಾಣ್ಯ ಅಪರೂಪದ ನಾಣ್ಯವಾಗಿದ್ದು, ಇದನ್ನು 1885ರ ಬ್ರಿಟಿಷ್ ರಾಜ್ ಇಂಡಿಯಾದಲ್ಲಿ ಟಂಕಿಸಲಾಗಿತ್ತು. ಸದ್ಯ ಈ ನಾಣ್ಯ ವ್ಯಕ್ತಿಯೊಬ್ಬರಿಗೆ ಭಾರೀ ಪ್ರಮಾಣದ ಮೊತ್ತದ ಹಣವನ್ನು ತಂದು ಕೊಟ್ಟಿದೆ. ನಿಮ್ಮ ಬಳಿಯೂ ಇಂತಹ ನಾಣ್ಯಗಳಿದ್ದರೇ, ನೀವು ಇವುಗಳನ್ನು ಮಾರಾಟ ಮಾಡಿ ಉತ್ತಮ ಮೊತ್ತವನ್ನು ಪಡೆಯಬಹುದಾಗಿದೆ.
ಆನ್ಲೈನ್ನಲ್ಲಿ ಇಂತಹ ಪ್ರಾಚೀನ ಹಾಗೂ ವಿಶೇಷ ನಾಣ್ಯಗಳ ಮಾರಾಟಕ್ಕಾಗಿ ಕಾಯಿನ್ ಬಜಾರ್ ವೆಬ್ಸೈಟ್ಗಳನ್ನು ತೆರೆಯಲಾಗಿದೆ. ನಿಮ್ಮ ಬಳಿ ಇಂತಹ ನಾಣ್ಯಗಳಿದ್ದರೇ ನೀವು ವೆಬ್ತಾಣಕ್ಕೆ ಭೇಟಿ ಕೊಟ್ಟು ನಿಮ್ಮ ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆ ಬಳಿಕ ನಿಮ್ಮಲ್ಲಿರುವ ನಾಣ್ಯದ ಬಗೆಗಿನ ವಿವರಗಳನ್ನು ನೀವು ವೆಬ್ಸೈಟ್ನಲ್ಲಿ ಹಂಚಿಕೊಂಡರೇ ಆಸಕ್ತಿ ಇರುವವರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ.
ಅಂದಹಾಗೇ, ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವರು ಇದೇ ರೀತಿ ಹಣ ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನ್ಯೂಯಾರ್ಕ್ನಲ್ಲಿ ವ್ಯಕ್ತಿಯೊಬ್ಬರು 1933ರಲ್ಲಿ ಟಂಕಿಸಿದ್ದ ಯುಎಸ್ ಕಾಯಿನ್ಅನ್ನು ಬರೋಬ್ಬರಿ 18.9 ಮಿಲಿಯನ್ ಡಾಲರ್ (138 ಕೋಟಿ ರೂಪಾಯಿ)ಗೆ ಮಾರಾಟ ಮಾಡಿದ್ರು.