Thursday, June 25, 2026
spot_imgspot_img
spot_imgspot_img

ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರಿಗೆ ವಿಶೇಷ ಗೌರವ

- Advertisement -
- Advertisement -

ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂತ್ರಿಯಾಗಿರುವ ಶ್ರೀ ಅರಗ ಜ್ಞಾನೇಂದ್ರ ಇವರು ಪಟ್ಲ ಸತೀಶ್ ಶೆಟ್ಟಿಯವರ ಹಾಡುಗಳನ್ನು ಕೇಳಿ ಪಟ್ಲರ ಅಭಿಮಾನಿಯಾಗಿದ್ದು , ಇಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಸನ್ಮಾನ್ಯ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ಅಮೇರಿಕ ಘಟಕದ ರೂವಾರಿ ಶ್ರೀ ಯೋಗೇಂದ್ರ ಭಟ್ ಶಾಲು ಹಾಕಿ ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಹೂಗುಚ್ಛ ನೀಡಿ ಗೌರವಿಸಿದರು. ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಸಚಿವರನ್ನು ಬರಮಾಡಿಕೊಂಡರು.

ಶಾಸಕರುಗಳಾದ ಶ್ರೀ ವೇದವ್ಯಾಸ ಕಾಮತ್, ಶ್ರೀ ಭರತ್ ವೈ ಶೆಟ್ಟಿ, ಶ್ರೀ ಹರೀಶ್ ಪೂಂಜ, ಫೌಂಡೇಶನಿನ ಪದಾಧಿಕಾರಿಗಳಾದ ಸುದೇಶ್ ಕುಮಾರ್ ರೈ, ಪ್ರದೀಪ್ ಆಳ್ವ ಕದ್ರಿ ಮತ್ತು ರವಿ ಶೆಟ್ಟಿ ಅಶೋಕನಗರ ಜೊತೆಗಿದ್ದರು.

driving
- Advertisement -

Related news

error: Content is protected !!