Tuesday, June 23, 2026
spot_imgspot_img
spot_imgspot_img

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ & ಯುವಕ ಮಂಡಲ ರಿ. ಸಹಭಾಗಿತ್ವದಲ್ಲಿ ನಡೆದ ಶ್ರೀ ಕೃಷ್ಣ ವೇಷ 2021 ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ) ವಿಟ್ಲ ಸಹಭಾಗಿತ್ವದಲ್ಲಿ ದ್ವಿತೀಯ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 850ಕ್ಕೂ ಅಧಿಕ ಪುಟಾಣಿಗಳು ಶ್ರೀ ಕೃಷ್ಣ ವೇಷದ ಭಾವಚಿತ್ರವನ್ನು ಕಳುಹಿಸಿ ಕೊಡುವ ಮೂಲಕ ಭಾಗವಹಿಸಿದ್ದು ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಶಿವಂ ಡ್ಯಾನ್ಸ್ ಅಕಾಡೆಮಿಯಲ್ಲಿ ನಡೆಯಿತು.

ಜೂನಿಯರ್ ವಿಭಾಗದಲ್ಲಿ ಪ್ರಥಮ ರುತ್ವಿ ಜೆ ಅಮೀನ್ ಪದಡ್ಕ ಮನೆ ಪುತ್ತೂರು, ದ್ವಿತೀಯ ಹನ್ಸ್ ಕಿರಣ್ ಶೆಟ್ಟಿ ಕಡೇಶಿವಾಲಯ, ತೃತೀಯ- ವಾಗ್ಮಿ ಕೆ ಕೆಮ್ಮಯಿ ಪಡೆದುಕೊಂಡು ಸಮಾಧಾನಕರ ಬಹುಮಾನವನ್ನು ಜಿಯನ್ಸ್ ಸೋಮೇಶ್ವರ, ಶಾರ್ವಿ. ಡಿ ಪೂಜಾರಿ ಇಡ್ಕಿದು, ಶಾರ್ವಿ ಟಿ ಬಾಯರು ಕಾಸರಗೋಡು ಇವರು ಪಡೆದುಕೊಂಡರು.

ಸೀನಿಯರ್ ವಿಭಾಗದಲ್ಲಿ ಪ್ರಥಮ ದಕ್ಷ್ ವೈ ಪೂಜಾರಿ ತುಂಬೆ, ದ್ವಿತೀಯ ಮೌಲೀಶ ಪ್ರಭು ಕುಕ್ಕಂದೂರು ಕಾರ್ಕಳ, ತೃತೀಯ ವೃಷಾಂಕ್ ಭಟ್ ಮನ್ನಿಪ್ಪಾಡಿ ಕಾಸರಗೋಡು ತಮ್ಮದಾಗಿಸಿಕೊಂಡರು. ಸಮಾಧಾನಕರ ಬಹುಮಾನ-ಪ್ರಾಯುಷಿ ಎಸ್. ಜೋಗಿ ಕಾಶಿಮಠ ವಿಟ್ಲ, ಅಥರ್ವ ಟಿ ಪುತ್ತೂರು, ಸಾನ್ವಿ ಎಂ ಅಂಚನ್ ಬಪ್ಪನಾಡು ಪಡೆದುಕೊಂಡರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್, ಯುವಕ ಮಂಡಲ ರಿ ವಿಟ್ಲ ಇದರ ಅಧ್ಯಕ್ಷ ವಸಂತ ಶೆಟ್ಟಿ, ಸುಧೀರ್ ನಾಯ್ಕ್, ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ, ಲಯನ್ಸ್ ಕ್ಲಬ್‌ನ ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್, ಸದಾನಂದ ಗೌಡ ಸೇರಾಜೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಹಾಗೂ ತೀರ್ಪುಗಾರರಾಗಿ ಸಹಕರಿಸಿದ ಆರ್ ಕೆ ಆರ್ಟ್ಸ್ನ ನಿರ್ದೇಶಕ ರಾಜೇಶ್ ವಿಟ್ಲ, ತತ್ವ ಸ್ಕೂಲ್ ಆಫ್ ಆರ್ಟ್ ನಿರ್ದೇಶಕ ಟೀಲಾಕ್ಷ ವಿಟ್ಲ ಇವರನ್ನು ಗೌರವಿಸಲಾಯಿತು. ಈ ವೇಳೆ ಶ್ವೇತಾ ಸುಧೀರ್ ನಾಯ್ಕ್, ಶಿವಂ ಡ್ಯಾನ್ಸ್ ಸದಸ್ಯರು, ಯುವಕ ಮಂಡಲದ ಸದಸ್ಯರು ಭಾಗಿಯಾಗಿದ್ದರು.

- Advertisement -

Related news

error: Content is protected !!