Monday, June 22, 2026
spot_imgspot_img
spot_imgspot_img

ಪ್ಯಾರಾಲಿಂಪಿಕ್ಸ್ ಕೊನೆಯ ದಿನದಂದು ಮುಂದುವರಿದ ಪದಕ ಭೇಟೆ; ಚಿನ್ನಕ್ಕೆ ಮುತ್ತಿಟ್ಟ ಕೃಷ್ಣ.! ಬೆಳ್ಳಿ ಗೆದ್ದ ಕನ್ನಡಿಗ

- Advertisement -
- Advertisement -

ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಕೊನೆಯ ದಿನವಾದ ಇಂದು ಸಹ ಭಾರತ ಪದಕ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ಚಿನ್ನ ಹಾಗೂ ಬೆಳ್ಳಿ ಭಾರತದ ಪಟ್ಟಿಗೆ ಸೇರಿಕೊಂಡಿದೆ.

ಸ್ವರ್ಣಗೆದ್ದ ಕೃಷ್ಣ..!
ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಅವರು ಹಾಂಕಾಂಗ್‌ನ ಚು ಮನ್ ಕೈ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹಾಂಕಾಂಗ್‌ ದೇಶದ ಚು ಮನ್ ಕೈ ಅವರನ್ನು 21-17, 16-21, 21-17 ಸೆಟ್ ಗಳಿಂದ ಕೃಷ್ಣ ನಗರ್ ಸೋಲಿಸಿದ್ದಾರೆ.

ರಜತ ಗೆದ್ದ ಕನ್ನಡಿಗ ಸುಹಾಸ್..!
ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಎಲ್ 4 ವಿಭಾಗದಲಿ ಸುಹಾಸ್ ಎಲ್ ಯತಿರಾಜು ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ. ಸುಹಾಸ್ ಯತಿರಾಜು ಅವರು ಮೂಲತಃ ಕನ್ನಡಿಗರು. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ. ನಿನ್ನೆ ನಡೆದಿದ್ದ ಸೆಮಿ ಫೈನಲ್ ನಲ್ಲಿ ಸುಹಾಸ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆದ್ದಿದ್ದರು.

ಈ ಮೂಲಕ ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಇದುವರೆಗೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡು ಭಾರತ 24ನೇ ಸ್ಥಾನದಲ್ಲಿದೆ

- Advertisement -

Related news

error: Content is protected !!