Friday, June 5, 2026
spot_imgspot_img
spot_imgspot_img

ಕೋಟ: ಹೈಡೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿ

- Advertisement -
- Advertisement -

ಕೋಟ: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರ ಕೋಟ ಮರು ಬಾಳೆಬೆಟ್ಟು, ಸಮೀಪ ಸಂಭವಿಸಿದೆ. ಹೈಡೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಬಳಿಕ ಸುಮಾರು 30 ಮೀಟರ್‌ ದೂರಕ್ಕೆ ಚಲಿಸಿ ಉರುಳಿಬಿದ್ದಿದೆ. ಇದರಿಂದ ಟ್ಯಾಂಕರ್‌ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕಾರವಾರದಿಂದ ಕೊಚ್ಚಿಗೆ 23 ಟನ್‌ ಹೈಡೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡಲಾಗುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!