Tuesday, April 30, 2024
spot_imgspot_img
spot_imgspot_img

ನಾಣ್ಯ ನುಂಗಿ ಅಸುನೀಗಿದ 4 ವರ್ಷದ ಮಗು!

- Advertisement -G L Acharya panikkar
- Advertisement -

ಮೈಸೂರು: ನಾಣ್ಯ ನುಂಗಿದ 4 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ಖುಷಿ (4) ಎನ್ನಲಾಗಿದೆ.

ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಐದು ರೂಪಾಯಿ ನಾಣ್ಯವನ್ನು ನುಂಗಿದ್ದಳು. ತಕ್ಷಣವೇ ಪೋಷಕರು ಮಗುವನ್ನು ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಗು ಮೃತಪಟ್ಟಿದೆ.

driving
- Advertisement -

Related news

error: Content is protected !!