- Advertisement -
- Advertisement -

ಕೊಕ್ಕಡ: ಅರಸಿನಮಕ್ಕಿಯ ಹೊಸ್ತೋಟ ಎಂಬಲ್ಲಿ ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಅರೇಕಲ್ ಮಹದೇವ್ ಭಟ್ ಎಂಬವವರಿಗೆ ಸೇರಿದ ಹಾಲು ಕರೆಯುವ ಎಮ್ಮೆಯನ್ನು ಮನೆಯ ಪರಿಸರದಲ್ಲಿ ಮೇಯಲು ಬಿಟ್ಟಿದ್ದು, ತಡರಾತ್ರಿವರೆಗೂ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಯವರು ಹುಡುಕಾಡಿದ ಬಳಿಕ ಅರಸಿನಮಕ್ಕಿ ಫಲಡ್ಕ ಬಳಿಯ ಕಾಡು ಪ್ರದೇಶದಲ್ಲಿ ಎಮ್ಮೆಯ ಮೃತದೇಹ ಪತ್ತೆಯಾಗಿದೆ. ಮನೆಯ ದಾರಿ ತಪ್ಪಿ ಅಲೆದಾಡುತ್ತಿದ್ದ ಎಮ್ಮೆಯನ್ನು ಕಾಡೆಮ್ಮೆ ಎಂದು ಭಾವಿಸಿ ಯಾರೋ ಬೇಟೆಗಾರರು ಗುಂಡು ಹಾರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.



- Advertisement -








