Tuesday, September 1, 2026
spot_imgspot_img
spot_imgspot_img

ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಅಜ್ಜಿಯ ತಲೆ ಮೇಲೆ ದೋಸೆ ಹೆಂಚು ಎತ್ತಾಕಿ ಕೊಲೆಗೈದ ಪಾಪಿ ಮೊಮ್ಮಗ

- Advertisement -
- Advertisement -

ತಮಿಳುನಾಡು: ಆಘಾತಕಾರಿ ಘಟನೆಯೊಂದರಲ್ಲಿ 30 ವರ್ಷದ ವ್ಯಕ್ತಿಯೋರ್ವ ಮದ್ಯ ಸೇವನೆಗೆ ಹಣ ನೀಡಿಲ್ಲವೆಂಬ ಕಾರಣಕ್ಕೆ ತನ್ನ ಅಜ್ಜಿಯನ್ನೇ ಕೊಲೆಗೈದ ಘಟನೆ ತಮಿಳುನಾಡಿನ ತಿರುವಳ್ಳುರ್ ಜಿಲ್ಲೆಯ ಶೊಲವರಂ ಎಂಬಲ್ಲಿ ನಡೆದಿದೆ. ಆರೋಪಿಯನ್ನ ಜೆಗನ್ ಎಂದು ಗುರುತಿಸಲಾಗಿದೆ.

ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಅಜ್ಜಿಯ ತಲೆ ಮೇಲೆ ದೋಸೆ ಬೇಯಿಸುವ ಹೆಂಚು ಎತ್ತಾಕಿ ಕೊಲೆಗೈದಿದ್ದಾನೆ. ಮೊದಲಿಗೆ ಅಜ್ಜಿಯ ಬಳಿ ತನಗೆ ಮದ್ಯ ಸೇವಿಸಲು ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ಹಣ ನೀಡಲು ಅಜ್ಜಿ ನಿರಾಕರಿಸಿದ್ದಕ್ಕೆ ದೋಸೆ ಹೆಂಚನ್ನು ತಲೆಯ ಮೇಲೆ ಬೀಳಿಸಿ ಹತ್ಯೆಗೈದಿದ್ದಾನೆ. ಸ್ಥಳೀಯರು ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಎದುರು ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

driving
- Advertisement -

Related news

error: Content is protected !!