
ಮಂಗಳೂರು ನಗರ ದಕ್ಷಿಣ ಕ್ಷೇತ್ರದ 35 ನೇ ಪದವು ಸೆಂಟ್ರಲ್ ವಾರ್ಡಿನ ಬಹುಜನರ, ಬಹು ವರ್ಷದ ಬೇಡಿಕೆಯಾದ ರಾಜೀವ ನಗರ ಹಾಗೂ ನೀತಿ ನಗರಕ್ಕೆ ಸಂಪರ್ಕಿಸುವ ಬಸ್ ಸಂಚಾರವನ್ನು ಇಂದು ಶ್ರೀಯುತ ಶಾಸಕರಾದ ವೇದವ್ಯಾಸ ಕಾಮತ್ ರವರ ಸಂಪೂರ್ಣ ಸಹಕಾರದಿಂದ, ಸ್ಥಳೀಯ ಮನಪಾ ಕಿಶೋರ್ ಕೊಟ್ಟಾರಿಯವರು ಚಾಲನೆ ನೀಡಿದರು.


ನಂತರ ಮಾತನಾಡಿದ ಸ್ಥಳೀಯ ಕಾರ್ಪೊರೇಟರ್ 2 ವರ್ಷಗಳ ಹಿಂದೆ ಸ್ಥಳಿಯರ ಮನವಿಯ ಮೇರೆಗೆ ಶಾಸಕರಿಗೆ ಮನವಿ ಮಾಡಿದಾಗ ತಕ್ಷಣ ಸ್ಪಂದಿಸಿ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ , ರಸ್ತೆ ತುಂಬಾ ಕಿರಿದಾಗಿದ್ದು ಇಲ್ಲಿ ಬಸ್ ಸಂಚಾರ ಸಾಧ್ಯವಿಲ್ಲ ಎಂದು ವರದಿ ನೀಡಿದರು.

ಶಾಸಕರು ಅದಕ್ಕೂ ಸ್ಪಂದಿಸಿ ಒಂದೂವರೆ ಕೋಟಿ ವೆಚ್ಚದಲ್ಲಿ 20 ಫೀಟ್ ಅಗಲೀಕರಣ ಮಾಡಿ , ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಇಂದು ಬಸ್ ಸಂಚಾರ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಶಾಸಕರ ವಿಶೇಷ ಮುತುವರ್ಜಿಯಲ್ಲಿ ಆಗಿದೆ ಎಂದು ಊರಿನವರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಅಡ್ಯಂತಾಯ ಹಾಗೂ ಸಾನಿಧ್ಯ ಶಿಕ್ಷಣ ಸಂಸ್ಥೆಯ ವಸಂತ ಶೆಟ್ಟಿ, ಬಸ್ ಮಾಲಕರಾದ ನಿತಿನ್ ಶೆಟ್ಟಿ, ಬಿಜೆಪಿ ಮುಖಂಡರಾದ ರಾಮಚಂದ್ರ ಚೌಟ ,ಹರೀಶ್ ರೈ,ಉಮೇಶ್ ರಾಜೀವನಗರ, ಮಣಿ ನೀತಿನಗರ,ಅಕ್ಷಯ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.












