
ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.08 ರಿಂದ ಅ.17 ರವರೆಗೆ ನಡೆಯಲಿದೆ.
ಅ.8 ರಂದು ಮುಂಜಾನೆ 5.30ಕ್ಕೆ ಗಣಹೋಮ ಹಾಗೂ ಕೊಪ್ಪರಿಗೆ ಮುಹೂರ್ತ ನಡೆಯಲಿದೆ.
ಅ.08 ರಿಂದ ಅ.16 ರವರೆಗೆ ಬೆಳಿಗ್ಗೆ 9.30 ರಿಂದ ಚಂಡಿಕಾಯಾಗ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ರಿಂದ 6 ರವರೆಗೆ ಭಜನಾ ಸಂಕೀರ್ತನೆ, 5.30 ರಿಂದ ದೀಪ ಪ್ರತಿಷ್ಠೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ನಡೆದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಅ.17 ರಂದು ಮುಂಜಾನೆ 5.30 ಕ್ಕೆ ಗಣಪತಿ ಹೋಮ, ಪಂಚಾಮೃತಾಭಿಷೇಕ ನಡೆದು, 7.30 ಕ್ಕೆ ಶ್ರೀ ಕುಂಭೇಶ್ವರಿ ಪೂಜೆ, ಕ್ಷೀರಾಭಿಷೇಕ ನಡೆಯಲಿದೆ. ಬೆಳಿಗ್ಗೆ 9ರಿಂದ ಧನ್ವಂತರಿ ಹೋಮ, ಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಪೂಜ್ಯ ಶ್ರೀಗಳವರಿಂದ ಮಧುಕರಿ ಕಾರ್ಯಕ್ರಮ ಬಳಿಕ ಮಹಾಪೂಜೆ, ಧಾರ್ಮಿಕ ಸಭೆ, ಸ್ವರ್ಣಮಂತ್ರಾಕ್ಷತೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2.30 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಹೊಸ ರೂಪುರೇಷೆಗಳೊಂದಿಗೆ ‘ಗೀತಾ ಸಾಹಿತ್ಯ ಸಂಭ್ರಮ’ ನಡೆಯಲಿದೆ. ಸಂಜೆ 4 ರಿಂದ ಭಜನಾ ಸಂಕೀರ್ತನೆ ನಡೆದು, 5.30 ರಿಂದ ದೀಪಾರಾಧನೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಅಷ್ಟಾವದಾನ ಸೇವೆ ನಡೆಯಲಿದೆ. ಬಳಿಕ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ರಿಂದ ಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ “ಶ್ರೀಧಾಮ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆಯಲಿದೆ.
ಅ.18 ರಂದು ಮುಂಜಾನೆ ಸೀಯಾಳಭಿಷೇಕ ನಡೆದು ನಾಗತಂಬಿಲ ನಡೆಯಲಿದೆ.

ವಿಶೇಷ ಕಾರ್ಯಕ್ರಮಗಳು:
- ಅ.10 ಆದಿತ್ಯವಾರ: “ಲಲಿತಾ ಪಂಚಮಿ ಪೂಜೆ”, ಮಧ್ಯಾಹ್ನ 2 ರಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ವೈಭವ
- ಅ.12 ಮಂಗಳವಾರ: ಶಾರದಾ ಪೂಜಾರಂಭ
- ಅ.13 ಬುಧವಾರ: ರಾತ್ರಿ 8ರಿಂದ ಪ್ರಸಿದ್ಧ ಕಲಾವಿದರಿಂದ ತೆಂಕು-ಬಡಗು ನೃತ್ಯ ವೈಭವ
- ಅ.14 ಗುರುವಾರ: ಮಹಾನವಮಿ, ಆಯುಧ ಪೂಜೆ ಮಧ್ಯಾಹ್ನ 2ರಿಂದ ಮಹಿಳಾ ಯಕ್ಷ ಕೂಟ, ಪೊನ್ನೆತ್ತೋಡು ಕಯ್ಯಾರ್ ಇವರಿಂದ ಯಕ್ಷಗಾನ ತಾಳಮದ್ದಲೆ “ಸುಧನ್ವ ಮೋಕ್ಷ”
- ಅ.17 ಆದಿತ್ಯವಾರ: ‘ಮಧುಕರಿ ಕಾರ್ಯಕ್ರಮ’ ನಡೆಯಲಿದೆ.

ಈ ದೇವತಾ ಕಾರ್ಯಕ್ಕೆ ಎಲ್ಲಾ ಭಗವದ್ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ(ರಿ) ಶ್ರೀಧಾಮ ಮಾಣಿಲ ಪ್ರಕಟಣೆಯಲ್ಲಿ ತಿಳಿಸಿದೆ.










