Thursday, July 23, 2026
spot_imgspot_img
spot_imgspot_img

ಪುತ್ತೂರು ಕ್ರಿಕೆಟ್ ಅಕಾಡೆಮಿಯ ಕುಳ ಗ್ರಾಮದ ಕಾರ್ಯಾಡಿ ಉಮ್ಮರ್ ಮೆಹರೂಪ್ ಸೇರಿ ನಾಲ್ವರು ವಿದ್ಯಾರ್ಥಿಗಳು ನ್ಯಾಷನಲ್ ಕ್ರಿಕೆಟ್ ಟೀಂ ಗೆ ಆಯ್ಕೆ; ಅ.28 ರಿಂದ ನ.15 ರವರೆಗೆ ಗೋವಾದ ಮಾಡ್ಗಾವ್ ನಲ್ಲಿ ನಡೆಯಲಿರುವ ರಾಷ್ಟೀಯ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿ

- Advertisement -
- Advertisement -
driving

ಪುತ್ತೂರು: ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಲೀಗ್ ನ ವತಿಯಿಂದ ಪುಣೆಯಲ್ಲಿ ನಡೆದ ಕ್ರಿಕೆಟ್ ಅಕಾಡೆಮಿಯ ನಾಲ್ಕು ಪ್ರಕ್ರಿಯೆಯಲ್ಲಿ ಪುತ್ತೂರು ಕ್ರಿಕೆಟ್ ಅಕಾಡೆಮಿಯ ನಾಲ್ಕು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕುಳ ಗ್ರಾಮದ ಕಾರ್ಯಾಡಿ ಅಬ್ದುಲ್ ಮುತಲಿಬ್ ಮತ್ತು ನೆಬಿಸಾ ದಂಪತಿ ಪುತ್ರ ಉಮ್ಮರ್ ಮೆಹರೂಪ್

ಕೆಮ್ಮಿಂಜೆ ಗ್ರಾಮದ ವಿನ್ಸೆಂಟ್ ಜೋಸೆಫ್ ಪ್ರಸನ್ನ ಹಾಗೂ ಸೆಲಿನಾ ಪಿಂಟೋ ದಂಪತಿ ಪುತ್ರ ವೆನೋನ್ ಪ್ರಸನ್ನ, ಕೊಡಿಪ್ಪಾಡಿ ಗ್ರಾಮದ ಚಂದ್ರಶೇಖರ್ ಮತ್ತು ಜ್ಯೋತಿ ದಂಪತಿ ಪುತ್ರ ಶ್ರೇಯಸ್, ಕುಳ ಗ್ರಾಮದ ಕಾರ್ಯಾಡಿ ಅಬ್ದುಲ್ ಮುತಲಿಬ್ ಮತ್ತು ನೆಬಿಸಾ ದಂಪತಿ ಪುತ್ರ ಉಮ್ಮರ್ ಮೆಹರೂಪ್, ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಶೇಖ್ ಅಬ್ದುಲ್ ರೆಹಮಾನ್ ಮತ್ತು ಝೀನತ್ ಬಾನು ದಂಪತಿ ಪುತ್ರ ಶೇಖ್ ಮೊಹಿಯುದ್ದೀನ್ ನ್ಯಾಷನಲ್ ಟೀಮ್ ಗೆ ಆಯ್ಕೆಯಾದವರು.

ಇವರು ಅ.28 ರಿಂದ ನ.15 ರವರೆಗೆ ಗೋವಾದ ಮಾಡ್ಗಾವ್ ನಲ್ಲಿ ನಡೆಯಲಿರುವ ರಾಷ್ಟೀಯ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳು ಪುತ್ತೂರು ಕ್ರಿಕೆಟ್ ಅಕಾಡೆಮಿಯ ತರಬೇತುದಾರ ಕೆ. ಹರೀಶ್ಚಂದ್ರ ಆಚಾರ್ಯರವರಲ್ಲಿ ತರಬೇತಿ ಪಡೆದಿದ್ದಾರೆ.

- Advertisement -

Related news

error: Content is protected !!