Monday, June 22, 2026
spot_imgspot_img
spot_imgspot_img

ಮಂಗಳೂರು: ದಸರಾ ಸಂಭ್ರಮಕ್ಕೆ ಸೇರಿದ ಗೆಳೆಯರು; ಗೆಳೆಯರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ!

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಪಂಪ್ ವೆಲ್ ಸಮೀಪದ ಲಾಡ್ಜ್ ಒಂದರಲ್ಲಿ ಪಾರ್ಟಿ ಮಾಡುವ ಸಲುವಾಗಿ ಸೇರಿದ್ದ ಯುವಕರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.

ಮೃತ ಯುವಕನನ್ನು ಧನುಷ್ (20) ಎಂದು ಗುರುತಿಸಲಾಗಿದ್ದು, ಈತ ತನ್ನ ನಾಲ್ವರು ಗೆಳೆಯರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಈ ಘಟನೆ ನಡೆದಿದೆ. ಅಕ್ಟೋಬರ್ 15ರ ಶುಕ್ರವಾರ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪವೆಲ್ ಬಳಿಯ ಲಾಡ್ಜ್ ಒಂದಕ್ಕೆ ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಪ್ರಜ್ವಲ್ ಎಂಬವರು ತೆರಳಿದ್ದಾರೆ.

ಈ ವೇಳೆ ಅ. 16 ರ ಮುಂಜಾನೆ ಸಮಯ ಸುಮಾರು ರಾತ್ರಿ ೨ ಗಂಟೆಗೆ ಜೇಸನ್ ಸುರತ್ಕಲ್ ಧನುಷ್ ಎಂಬುವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಜೇಸನ್ ಸುರತ್ಕಲ್ ಎಂಬಾತನು ತನ್ನಲ್ಲಿರುವ ಹರಿತವಾದ ಆಯುಧದಿಂದ ಧನುಷ್ ಗೆ ಚುಚ್ಚಿದ್ದಾನೆ ಎನ್ನಲಾಗಿದೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡ ಧನುಷ್ ನನ್ನು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಯ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ.

- Advertisement -

Related news

error: Content is protected !!