Wednesday, May 1, 2024
spot_imgspot_img
spot_imgspot_img

ನೆಲ್ಯಾಡಿ: ಚಿನ್ಮಯ ಗೌಡ ಹಾಗೂ ರಿತಿಕ್ ಶೆಟ್ಟಿ ಇಬ್ಬರು ಜೊತೆಗೂಡಿ ವಿಶೇಷವಾದ ಕನ್ನಡಕ ಆವಿಷ್ಕಾರ; ಚಾಲಕರನ್ನು ನಿದ್ರೆಯಿಂದ ಎಚ್ಚರಿಸಿ ಅಲರ್ಟ್ ಕೊಡುತ್ತೆ..!

- Advertisement -G L Acharya panikkar
- Advertisement -

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಜ್ಞಾನೋದಯ ಬೆಥನಿ ಪಿ ಯು ಕಾಲೇಜು ನೆಲ್ಯಾಡಿ ಇಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿರುವ ಚಿನ್ಮಯ ಗೌಡ ಹಾಗೂ ರಿತಿಕ್ ಶೆಟ್ಟಿ ಇವರು ಇಬ್ಬರು ಸೇರಿ ಒಂದು ಕನ್ನಡಕವನ್ನು ಆವಿಷ್ಕಾರ ಮಾಡಿದ್ದಾರೆ.

ಈ ಕನ್ನಡಕದ ವಿಶೇಷತೆಯೇನೆಂದರೆ ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸುತ್ತಿರುವಾಗ ನಿದ್ದೆ ಬಂದಾಗ ಕಣ್ಣಿನ ರೆಪ್ಪೆ ಮುಚ್ಚಿದಾಗ ಅಲರಾಮ್ ಹಾಗೂ ವೈಬ್ರೇಟ್ ಆಗುತ್ತದೆ. ಇದರಿಂದ ಚಾಲಕರು ನಿದ್ದೆಗೆ ಜಾರುವುದನ್ನು ತಪ್ಪಿಸಬಹುದು.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಚಂದ್ರಶೇಕರ ಗೌಡ ಮತ್ತು ಶ್ರೀಮತಿ ಚೇತನಾ ದಂಪತಿಗಳ ಮಗ ಚಿನ್ಮಯ ಗೌಡ ಹಾಗೂ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ರವಿಪ್ರಸಾದ್ ಶೆಟ್ಟಿ ಮತ್ತು ಶ್ರೀಮತಿ ಶಕುಂತಳಾ ಶೆಟ್ಟಿ ಇವರ ಮಗ ರಿತಿಕ್ ಶೆಟ್ಟಿ ಇವರು 9ನೇ ತರಗತಿಯಲ್ಲಿ ಓದುತ್ತಿದ್ದಾರೆ.

- Advertisement -

Related news

error: Content is protected !!