Thursday, October 1, 2026
spot_imgspot_img
spot_imgspot_img

ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೋರ್ವರಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಪರವಾನಿಗೆ ಹೊಂದಿರುವ ಕೋವಿಯೊಂದು ನೆಲಕ್ಕೆ ಬಿದ್ದ ಸಮಯದಲ್ಲಿ ಗುಂಡು ಸಿಡಿದು ವ್ಯಕ್ತಿಯೊಬ್ಬರ ಕಾಲಿಗೆ ತಾಗಿರುವ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮಾಯಿಲೋಡಿ ಎಂಬಲ್ಲಿ ನಡೆದಿದೆ. ಕುಮಾರಯ್ಯ ನಾಯ್ಕ ಗಾಯಗೊಂಡಿರುವ ವ್ಯಕ್ತಿ.

ಏನಿದು ಘಟನೆ ?
ಮಾಯಿಲೋಡಿಯ ವಿಶ್ವನಾಥ ನಾಯ್ಕ ಎಂಬವರು ತನ್ನ ಜಮೀನಿಗೆ ಬಂದಿರುವ ಕಾಡುಪ್ರಾಣಿಗಳನ್ನು ಓಡಿಸಲು ಪರವಾನಿಗೆ ಹೊಂದಿರುವ ಕೋವಿಯನ್ನು ಉಪಯೋಗಿಸುವ ಸಮಯದಲ್ಲಿ ಅಜಾಗರೂಕತೆ ತೋರಿದ ಪರಿಣಾಮ ಕೋವಿ ನೆಲಕ್ಕೆ ಬಿದ್ದು ಆಕಸ್ಮಿಕವಾಗಿ ಗುಂಡು ಸಿಡಿದು ಅಂಗಳದಲ್ಲಿ ನಿಂತಿದ್ದ ಕುಮಾರಯ್ಯ ನಾಯ್ಕ ಎಂಬವರ ಕಾಲಿಗೆ ಗುಂಡು ತಗುಲಿ ಗಾಯ ಗೊಂಡಿದೆ.

ಕೂಡಲೇ ಅವರಿಗೆ ಪ್ರಾಥಮಿಕ ಆರೈಕೆ ಮಾಡಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!