Wednesday, July 29, 2026
spot_imgspot_img
spot_imgspot_img

ಕಾಂಪ್ರಬೈಲು: ಶ್ರೀ ಉಳ್ಳಾಲ್ತಿ ಅಮ್ಮ ಮತ್ತು ಅಜ್ವರ ದೈವಂಗಳ ಭಂಡಾರದ ಮನೆಯಲ್ಲಿ ಗೋಪೂಜನ ಕಾರ್ಯಕ್ರಮ

- Advertisement -
- Advertisement -

ಮೊಗರ್ನಾಡು ಸಾವಿರ ಸೀಮೆಯ ಶ್ರೀ ಉಳ್ಳಾಲ್ತಿ ಅಮ್ಮ ಮತ್ತು ಅಜ್ವರ ದೈವಂಗಳ ಭಂಡಾರದ ಮನೆ ಕಾಂಪ್ರಬೈಲು ಇಲ್ಲಿ ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಯ ಅಪೇಕ್ಷೆಯ ಮೇರೆಗೆ ದೀಪಾವಳಿಯ ಪ್ರಯುಕ್ತ ಗೋಪೂಜನ ಕಾರ್ಯಕ್ರಮ ಅರ್ಚಕರಾದ ಶ್ರೀ ಅನಂತ ಭಟ್ ಅವರ ಮಾರ್ಗದರ್ಶನದಲ್ಲಿ ಪೂಜಾ ವಿಧಿ ವಿಧಾನಗಳನ್ನು ಮಾಡಲಾಯಿತು.

ಸರ್ವ ದೇವಾನು ದೇವತೆಗಳು ಗೋವಿನಲ್ಲಿ ವಾಸವಾಗಿದ್ದಾರೆ. ಮಾನವ ತನ್ನ ತಾಯಿಯ ಹಾಲು ಬಿಟ್ಟ ನಂತರ ಜೀವನದಲ್ಲಿ ಗೋವಿನ ಹಾಲು ಉಪಯೋಗ ಮಾಡುತ್ತಾನೆ. ಹಾಗಾಗೀ ಗೋವಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ.

ಇಂತಹ ಹಲವಾರು ಗುಣಗಳನ್ನು ಹೊಂದಿರುವ ಈ ಗೋವುಗಳನ್ನು ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಪೂಜಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯಾನಂದ ಆಚಾರ್ಯ, ಮತ್ತು ಸಮಿತಿಯ ಸರ್ವ ಸದಸ್ಯರು ಹಾಗೂ ಊರ ಸಮಸ್ತರು ಭಾಗವಹಿಸಿದ್ದರು.

- Advertisement -

Related news

error: Content is protected !!