Tuesday, July 28, 2026
spot_imgspot_img
spot_imgspot_img

ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದ ಪುರಾತನ ವಿಗ್ರಹ ಇಂದು ಮರಳಿ ತವರಿಗೆ..!

- Advertisement -
- Advertisement -

ಉತ್ತರ ಪ್ರದೇಶ: ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದೊಯ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಇಂದು ಉತ್ತರ ಪ್ರದೇಶ ಸರ್ಕಾರ ವಾಪಾಸ್​ ಪಡೆಯಲಿದೆ.

18ನೇ ಶತಮಾನದ ಕಲ್ಲಿನಿಂದ ನಿರ್ಮಾಣವಾದ ಅನ್ನಪೂರ್ಣ ದೇವಿಯ ಶಿಲ್ಪ ಇದಾಗಿದ್ದು, ಇದನ್ನು ಕೆನಡಾದಿಂದ ರಾಷ್ಟ್ರ ರಾಜಧಾನಿಗೆ ತರಲಾಗಿದೆ. ಈ ಕಲ್ಲಿನ ವಿಗ್ರಹವು 17 ಸೆಂಟಿ ಮೀಟರ್​ ಎತ್ತರ, 9 ಸೆಂಟಿ ಮೀಟರ್​ ಅಗಲ ಹಾಗೂ 4 ಸೆಂಟಿ ಮೀಟರ್​ ದಪ್ಪವಿದೆ.

ಸದ್ಯ ದೆಹಲಿಯಲ್ಲಿರುವ ಈ ವಿಗ್ರಹವನ್ನು ಕೆಲವೇ ಸಮಯಗಳಲ್ಲಿ ಅಲಿಘರ್​ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ವಿಗ್ರಹವನ್ನು ನಾಳೆ ಕಣೌಜ್​ಗೆ ಕೊಂಡೊಯ್ಯಲಾಗುತ್ತದೆ. ಇದಾದ ಬಳಿಕ ನವೆಂಬರ್​ 14ರಂದು ಅಯೋಧ್ಯಾಗೆ ಸಾಗಿಸಲಾಗುತ್ತದೆ.

ನವೆಂಬರ್​ 15ರಂದು ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಸಕಲ ಸಂಪ್ರದಾಯದಂತೆ ಪ್ರತಿಮೆ ಅನುಷ್ಟಾನಗೊಳ್ಳಲಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ನವೆಂಬರ್​ 15ರಂದು ಕಾಶಿ ವಿಶ್ವನಾಥ ದೇಗುಲದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಿದ್ದಾರೆ.

- Advertisement -

Related news

error: Content is protected !!