- Advertisement -
- Advertisement -


ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿದ ವಿದ್ಯಾರ್ಥಿನಿಯೊಬ್ಬಳನ್ನು ವಿದ್ಯಾರ್ಥಿಯೊಬ್ಬ ರಕ್ಷಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿನಿಯೊಬ್ಬಳು ರೈಲು ಹತ್ತಲು ಯತ್ನಿಸಿದಾಗ ಕಾಲು ಜಾರಿ ಹಳಿಗಳ ಮೇಲೆ ಬಿದ್ದಿದ್ದು, ಈ ವೇಳೆ ಮಂಜೇಶ್ವರ ನಿವಾಸಿ ವಿದ್ಯಾರ್ಥಿ ಮನೀಶ್ ಎಂಬಾತ ಆಕೆಯನ್ನು ತಕ್ಷಣ ಹಳಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾನೆ. ಆತನ ಧೈರ್ಯಕ್ಕೆ ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



- Advertisement -








