Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ರಬ್ಬರ್ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆಯನ್ನು ಯಶಸ್ವಿಯಾಗಿ ಸೆರೆ ಹಿಡಿದ ಅರಣ್ಯ ಇಲಾಖೆ

- Advertisement -
- Advertisement -
vtv vitla
vtv vitla

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿನ ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ್ದು, ಅದನ್ನು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಮೊಸಳೆ ಕಂಡುಬಂದಿದ್ದು ರಬ್ಬರ್ ತೋಟದ ಸೊಪ್ಪು ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದೆ. ಇದರಿಂದ ಗಾಬರಿಯಾದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸೆರೆ ಹಿಡಿದಿದ್ದಾರೆ.

2019 ಜೂನ್ ತಿಂಗಳಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು ಬಾವಿಯಲ್ಲಿ ಮೊಸಳೆ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅರಣ್ಯ ಇಲಾಖೆಯ ಕಾರ್ಯಚರಣೆಯಿಂದ ಮೊಸಳೆಯನ್ನು ಸಂರಕ್ಷಿಸಿ ಚಾರ್ಮಾಡಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು.

ಇದೀಗ ಎರಡು ವರ್ಷಗಳ ಬಳಿಕ ಬೆಳ್ತಂಗಡಿ ತಾಲೂಕಿನಲ್ಲಿ ಎರಡನೆ ಬಾರಿಗೆ ಮೊಸಳೆಯೊಂದು ಪತ್ತೆಯಾಗಿದೆ.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!