Monday, June 30, 2025
spot_imgspot_img
spot_imgspot_img

ಕಾರಿನ ಶೋರೂಮ್​​ನಲ್ಲಿ ಅಗ್ನಿ ಅವಘಡ; 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟು ಭಸ್ಮ..!

- Advertisement -
- Advertisement -
vtv vitla
vtv vitla
vtv vitla

ಶೋರೂಮ್ ವೊಂದರಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಆಗಿದ್ದು, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾ ಕರಕಲಾದ ಘಟನೆ ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿ ಇಂದು ಮುಂಜಾನೆ 5.30ರ ಹೊತ್ತಿಗೆ ಬೆಂಕಿ ಬಿದ್ದಿದೆ ಎಂದು ತಿಳಿದುಬಂದಿದೆ.

vtv vitla

ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್​ ಮಾಡಲಾದ ಗೋಡೌನ್​ ಕೂಡ ಇತ್ತು. ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್​, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್​ ಫೈಟ್​ ಟ್ರಕ್​ಗಳನ್ನು ತರಲಾಗಿತ್ತು.

ಬೆಂಕಿ ನಂದಿಸಲು 6ಗಂಟೆಗಳ ಕಾಲ ಬೇಕಾಯಿತು ಎಂದು ವರದಿಯಾಗಿದೆ. ಶೋರೂಂ ಮತ್ತು ಗೋಡೌನ್​ಗೆ ಬೆಂಕಿ ಬೀಳಲು ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.

vtv vitla

ಮೊದಲು ಬೆಂಕಿ ಹೊತ್ತಿದ್ದು ಕಾರು ಶೋರೂಂಗೆ ಸೇರಿದ ಮಳಿಗೆಯಲ್ಲಿ ಪಾರ್ಕ್​ ಮಾಡಲಾಗಿದ್ದ ಡಿ-207 ಬಿಎಂಡಬ್ಲ್ಯೂ ಕಾರಿನಲ್ಲಿ. ಅದು ಒಮ್ಮೆಲೇ ಪಸರಿಸುತ್ತ ಹೋಗಿ ಸುಮಾರು 40 ಕಾರುಗಳು ಧಗಧಗನೆ ಹೊತ್ತಿ ಉರಿದಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ.

vtv vitla
- Advertisement -

Related news

error: Content is protected !!