- Advertisement -
- Advertisement -
ಮಂಗಳೂರಿನಿಂದ ಹೊರಟು ವಿಟ್ಲ, ಪುತ್ತೂರು ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಸೌಲಭ್ಯವನ್ನು ಡಿ. 19ರಂದು ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಜ್ದೂರು ಸಂಘ ಪುತ್ತೂರು ವಿಭಾಗ ಪ್ರಕಟನೆಯಲ್ಲಿ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಲಾಕ್ಡೌನ್ ಮಾಡಿರುವುದರಿಂದ ಈ ಅವಧಿಯಲ್ಲಿ ನಿಗಮದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿತ್ತು.
ಪ್ರಸ್ತುತ ಕೋವಿಡ್-19 ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕ.ರಾ.ರ.ಸಾ.ನಿಗಮದ ವತಿಯಿಂದ ಮಂಗಳೂರು-ವಿಟ್ಲ-ಪುತ್ತೂರು-ಬೆಂಗಳೂರು ಮಾರ್ಗದಲ್ಲಿ ಕ್ಲಬ್ ಕ್ಲಾಸ್ ವೋಲ್ವೋ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 19-12-2021 ರಿಂದ ಕಾರ್ಯಾಚರಣೆ ಮಾಡಲಾಗುವುದು.
ಈ ಬಸ್ ನ ವಿಶೇಷತೆ:
- ಮಲ್ಟಿ ಆಕ್ವೆಲ್ ವೋಲ್ಟೋ ವಾಹನ
- ಉತ್ತಮ ಹವಾನಿಯಂತ್ರಿತ ವ್ಯವಸ್ಥೆ
- ಡಿಜಿಟಲ್ ಬೋರ್ಡ್ ವ್ಯವಸ್ಥೆ
- ಪ್ರತಿ ಸೀಟ್ ನಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ
- ಸೆಮಿ ಸ್ಲೀಪರ್ ಸೀಟ್ ಗಳು
- ಆಡಿಯೋ ಮತ್ತು ವಿಡಿಯೋ ವ್ಯವಸ್ಥೆ
- Advertisement -