Tuesday, September 1, 2026
spot_imgspot_img
spot_imgspot_img

ಸ್ಯಾಂಡಲ್’ವುಡ್ ನ ಹಿರಿಯ ನಿರ್ದೇಶಕ ಕೆ.ವಿ. ರಾಜು ವಿಧಿವಶ

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ. ರಾಜು ಡಿ.24 ರ ಶುಕ್ರವಾರ ವಿಧಿವಶರಾಗಿದ್ದಾರೆ. ಅನಾರೋಗ್ಯದ ಕಾರಣ ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಕೆವಿ ರಾಜು ಅವರು ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.

ಕೆ.ವಿ. ರಾಜು ಅವರು ಇಂದ್ರಜಿತ್, ಯುದ್ಧಕಾಂಡ, ಬೆಳ್ಳಿ ಮೋಡ, ಹುಲಿಯಾ, ಬೆಳ್ಳಿ ಕಾಲುಂಗುರ, ಸಂಗ್ರಾಮ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ರಾಜಾಜಿನಗರ ನಿವಾಸದಲ್ಲಿಯೇ ಕೆ.ವಿ. ರಾಜು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಸಂಜೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

vtv vitla
vtv vitla
- Advertisement -

Related news

error: Content is protected !!