Saturday, September 5, 2026
spot_imgspot_img
spot_imgspot_img

ಮಂಗಳೂರು: MRPL ಕಂಪೆನಿಯ CISF ಇನ್ಸ್​ಪೆಕ್ಟರ್ ನಾಪತ್ತೆ..!!

- Advertisement -
- Advertisement -

ಮಂಗಳೂರು: ತಾಲೂಕಿನ ಕುತ್ತೆತೂರು ಗ್ರಾಮದ ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‍ನಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಡಿಗ್ಗಿ ಡಿ.ಎಸ್ (34 ) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

vtv vitla

ಡಿಗ್ಗಿ ಅವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್‍ನ ಬ್ಯಾಚುಲರ್ ಬ್ಯಾರಕ್‍ನಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರು,ನಸು ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, 165 ಸೆಂಟಿ ಮೀಟರ್ ಎತ್ತರ ಇರುತ್ತಾರೆ. ಕ್ರೀಂ ಬಣ್ಣದ ಟೀ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಲಭ್ಯವಾದರೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!