Tuesday, August 4, 2026
spot_imgspot_img
spot_imgspot_img

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ!

- Advertisement -
- Advertisement -
vtv vitla
vtv vitla

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ವರದಿಯಾಗಿದೆ. ಮೃತವ್ಯಕ್ತಿ ಕಾರಾಜೆ ನಿವಾಸಿ ಜಲೀಲ್ (55) ಎಂದು ಗುರುತಿಸಲಾಗಿದೆ.

ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

vtv vitla

11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್ ಚಪ್ಪಲಿ ಹಾಗೂ ಮೊಬೈಲ್ ಇಟ್ಟು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು. ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಕಾರಾಜೆ ನಿವಾಸಿ ಜಲೀಲ್ ಎಂದು ಗುರುತು ಪತ್ತೆಯಾಗಿತ್ತು. ಆದರೆ ತಡ ರಾತ್ರಿವರೆಗೂ ಹುಡುಕಿದಾಗ ವ್ಯಕ್ತಿ ಪತ್ತೆಯಾಗಿರಲಿಲ್ಲ.

ಇನ್ನು ಇಂದು ಮುಂಜಾನೆಯಿಂದ ಸ್ಥಳೀಯ ಈಜುಗಾರ ಸತ್ತಾರ್ ಹಾಗೂ ಮೊಹಮ್ಮದ್ ಅವರು ನದಿಯಲ್ಲಿ ಈಜಾಡಿ ಹುಡುಕಿದಾಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Related news

error: Content is protected !!