

ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಕರೋಪಾಡಿ ಕ್ಷೇತ್ರ ನಿರ್ವಹಣಾ ಸಮಿತಿ ಇದರ ವಗೆನಾಡು ಶ್ರೀ ಸುಬ್ರಾಯ ದೇವರ ಬ್ರಹ್ಮಕಲಶದ ದಿನದ ವಾರ್ಷಿಕ ಪ್ರತಿಷ್ಠಾ ಜಯಂತಿ ಕಾರ್ಯಕ್ರಮವು ಜ. 23 ನೇ ಆದಿತ್ಯವಾರ ನಡೆಯಲಿದೆ.
ಬೆಳಿಗ್ಗೆ 06-57ಕ್ಕೆ ದೀಪಜ್ವಲನ ಭಜನೆ ಆರಂಭ, ಬೆಳಿಗ್ಗೆ ಗಂಟೆ 9:೦೦ ರಿಂದ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಪವಮಾನ ಅಭಿಷೇಕ, ನವಕ ಕಲಶಾಭಿಷೇಕ, ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ, ಬಲಿವಾಡು ಕೂಟ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 5-30 ರಿಂದ ದುರ್ಗಾಪೂಜೆ ಸಂಕಲ್ಪ ಪ್ರಾರಂಭ, 6-23 ಕ್ಕೆ : ಭಜನೆ ಮಂಗಳ ರಾತ್ರಿ, 07-30 ಕ್ಕೆ : ದುರ್ಗಾಪೂಜೆ ಮಂಗಳಾರತಿ, ಸಾಮೂಹಿಕ ದುರ್ಗಾಪೂಜೆಯು ಮಹಿಳಾ ಸಮಿತಿ ವತಿಯಿಂದ ನಡೆಯಲಿದೆ. ರಾತ್ರಿ ಗಂಟೆ 08-00 ಕ್ಕೆ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸೇವೆಗಳ ವಿವರ:
ದುರ್ಗಾಪೂಜೆ ರೂ 100-00 ಕಾರ್ತಿಕ ಪೂಜೆ. ರೂ 50-00 ಅಪ್ಪ ಸೇವೆ. ರೂ 50-00 ಗಣಪತಿ ಹೋಮ ರೂ 100-00











