Sunday, September 27, 2026
spot_imgspot_img
spot_imgspot_img

ಬಂಟ್ವಾಳ: ಸುಗ್ರಾಮ ಗ್ರಾ. ಪಂ. ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -
vtv vitla

ಬಂಟ್ವಾಳ ತಾಲ್ಲೂಕು ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯು ಬಿಸಿರೋಡ್ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಶಕಿಲಾ ಪೂಜಾರಿ ನೆಟ್ಲಮುಡ್ನೂರು, ಉಪಾಧ್ಯಕ್ಷರಾಗಿ ಪ್ರೇಮಲತಾ ವಿಟ್ಲ ಪಡ್ನೂರು, ಕಾರ್ಯದರ್ಶಿಯಾಗಿ ಸೌಮ್ಯಲತಾ ಕೊಳ್ನಾಡು, ಕೋಶಾಧಿಕಾರಿಯಾಗಿ ವಿಜಯ ಮಂಚಿ, ನಿರ್ದೇಶಕರಾಗಿ ಝೊಹರ ಬಾಳೆಪುಣಿ, ಅಮಿತ ಎಸ್ ಭಂಡಾರಿ ಸಾಲೆತ್ತೂರು, ಅಶ್ವಿನಿ ಅಮ್ಟಾಡಿ ಆಯ್ಕೆಯಾದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಬಂಟ್ವಾಳ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ, ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಭಾಗವಹಿಸಿ ಮಹಿಳೆಯರಿಗೆ ನಾಯಕತ್ವ ಸಂಘಟನೆ ಬಗ್ಗೆ ಪ್ರೇರಣೆ ನುಡಿಗಳನ್ನಾಡಿದರು.

- Advertisement -

Related news

error: Content is protected !!