Thursday, September 10, 2026
spot_imgspot_img
spot_imgspot_img

ಬಂಟ್ವಾಳ: ಜೆಸಿ ಶೈಲಜಾ ರಾಜೇಶ್ ರವರ ಪದಗ್ರಹಣ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ರೀಜನ್ ಎಫ್ ಝೋನ್ ಎಕ್ಸ್ ವಿ ಜೆಸಿಐ ಇಂಡಿಯಾದ ಜೆಸಿ ಶೈಲಜಾ ರಾಜೇಶ್ ರವರ ಪದಗ್ರಹಣ ಕಾರ್ಯಕ್ರಮವು ದಿ 17 ರಂದು ಆದಿತ್ಯವಾರ ಬೆಳಿಗ್ಗೆ 10 ಕ್ಕೆ ಸ್ಪರ್ಶ ಕಲಾ ಮಂದಿರ ಬಿ.ಸಿ ರೋಡಿನಲ್ಲಿ ನಡೆಯಲಿರುವುದು.

ಮುಖ್ಯ ಅಥಿತಿಗಳಾಗಿ ಪದ್ಮರಾಜ್ ಆರ್ ನೋಟರಿ ವಕೀಲರು ಮತ್ತು ಖಾಜಾಂಜಿ ಶ್ರೀ ಗೋಕರ್ಣನಾಥ ದೇವಸ್ಥಾನ
ಕುದ್ರೋಳಿ ಮತ್ತು ಸತೀಶ್ ರಾವ್ ವಕೀಲರು ಬಿ.ಸಿ ರೋಡ್ ಆಗಮಿಸಲಿದ್ದಾರೆ.

ಗೌರವನ್ವಿತ ಅತಿಥಿಗಳಾಗಿ ಜೆಸಿಐ ಸೆನ್ ಸೌಜನ್ಯ ಹೆಗ್ಡೆ (ಅಧ್ಯಕ್ಷರು ಝೋನ್ ಎಕ್ಸ್ ವಿ ಜೆಸಿಐ ಇಂಡಿಯಾ),
ಅರ್ಜುನ್ ಭಂಡಾರ್ಕರ್ (ಸ್ಥಾಪಕರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು),
ವಿದ್ಯಾವತಿ ಪ್ರಮೋದ್ ಕುಮಾರ್ (ಪಟ್ಟಣ ಪಂಚಾಯತ್ ಸದಸ್ಯರು ಬಂಟ್ವಾಳ) ಆಗಮಿಸಲಿದ್ದಾರೆ.

ಪದಗ್ರಹಣ ಅಧಿಕಾರಿಯಾಗಿ ಜೆಸಿಐ ಸೆನ್ ಶರತ್ ಕುಮಾರ್ (ಝೆಡ್ ವಿ ಪಿ ಎಲೆಕ್ಟ್ ರೀಜಿಯನ್ ಎಫ್ ಝೋನ್ ಎಕ್ಸ್ ವಿ ಜೆಸಿಐ ಇಂಡಿಯಾ) ಆಗಮಿಸಿ ಪದಗ್ರಹಣವನ್ನು ನೆರವೇರಿಸಲಿದ್ದಾರೆ.

ಈ ಪದಗ್ರಹಣ ಸಮಾರಂಭಕ್ಕೆ ಜೆಸಿ ಶೈಲಜಾ ರಾಜೇಶ್ ಚುನಾಯಿತ ಅಧ್ಯಕ್ಷರು, ಕೆ ಮಲ್ಲಿಕಾ ಆಳ್ವ ಚುನಾಯಿತ ಕಾರ್ಯದರ್ಶಿ, ಶ್ರೀನಿಧಿ ಭಟ್ ಅಧ್ಯಕ್ಷರು ಕಿಶನ್ ಎನ್ ರಾವ್ ಕಾರ್ಯದರ್ಶಿ ಹಾಗೂ ಜೆಸಿಐ ಜೋಡುಮಾರ್ಗ ನೇತ್ರಾವತಿಯ ಎಲ್ಲಾ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆ.

ಈ ಕಾರ್ಯಕ್ರಮದ ನೇರ ಪ್ರಸಾರವು ನಿಮ್ಮ ನೆಚ್ಚಿನ ವಿಟಿವಿ ಯಲ್ಲಿ ಪ್ರಸಾರವಾಗಲಿದೆ.

- Advertisement -

Related news

error: Content is protected !!