Monday, August 31, 2026
spot_imgspot_img
spot_imgspot_img

ಪತಿಯಿಂದಲೇ ಪತ್ನಿಯ ಮತಾಂತರಕ್ಕೆ ಒತ್ತಾಯ; ಆಕೆ ನಿರಾಕರಿಸಿದ್ದಕ್ಕೆ ಕಿರುಕುಳ ನೀಡಿದ ಪತಿ; ನೊಂದ ಮಹಿಳೆಯಿಂದ ಪತಿಯ ವಿರುದ್ಧ ದೂರು

- Advertisement -
- Advertisement -
suvarna gold

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಪತ್ನಿಗೆ ಒತ್ತಾಯಿಸಿದ್ದು, ಆಕೆ ನಿರಾಕರಿಸಿದ್ದರಿಂದ ಪತಿಯೇ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗಂಡನ ವಿರುದ್ಧ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡಿಕೊಂಡಿದ್ದ, ಬಳಿಕ ಆಮಿಷಕ್ಕೆ ಒಳಗಾಗಿ ಮೂರು ತಿಂಗಳ ಹಿಂದೆ ಮತಾಂತರವಾಗಿದ್ದಾರೆ.ಇದೀಗ ಮನೆಯವರಿಗೂ ಮತಾಂತರವಾಗುವಂತೆಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

‘ಕಳೆದ ಮೂರು ತಿಂಗಳಿನಿಂದ ಪತಿ ಮತಾಂತರಕ್ಕೆ ಕಿರುಕುಳ ನೀಡುತ್ತಿದ್ದಾನೆ. ಮತಾಂತರವಾಗದಿದ್ದರೆ ತವರಿಗೆ ಹೋಗುವಂತೆ ಬಲವಂತ ಮಾಡುತ್ತಿದ್ದಾನೆ. ಮಕ್ಕಳು ಓದಿಕೊಳ್ಳುವ ಸಮಯದಲ್ಲಿ,ಬೈಬಲ್ ಓದುವ ಪತಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಜೋರಾಗಿ ಓದದಂತೆ ತಾಕೀತು ಮಾಡುತ್ತಿದ್ದಾನೆ. ಮನೆಯ ಹಿರಿಯರು ಪಂಚಾಯ್ತಿ ಮಾಡಿದಾಗ,ಪತಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಮೂವರು ಮಕ್ಕಳನ್ನು ಸಾಕಲಾಗದೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ‘ನೊಂದ ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!