

ಉಡುಪಿ: ಕೆಜಿಎಫ್ 2 ಚಿತ್ರದ ಯಶಸ್ಸಿಗಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಚಿತ್ರ ತಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕೆಜಿಎಫ್ 2 ಸಿನಿಮಾದ ಮ್ಯೂಸಿಕ್ಗೆ ಫೈನಲ್ ಟಚ್ ಉಡುಪಿಯ ಬಸ್ರೂರಿನಲ್ಲಿ ನಡೆಯುತ್ತಿದ್ದು, ಬಸ್ರೂರಿಗೆ ಆಗಮಿಸಿದ ಯಶ್ ಕ್ರಿಕೆಟ್ ಆಡ್ತಾ ಎಂಜಾಯ್ ಮಾಡ್ತಿದ್ದಾರೆ. ಇನ್ನು ತಮಗಿಷ್ಟದ ನಟನನ್ನು ಕಣ್ತುಂಬಿಕೊಂಡ ಫ್ಯಾನ್ಸ್ ಖುಷ್ ಆಗಿದ್ದಾರೆ.


ಸದ್ಯ ಕೆಜಿಎಫ್ 2 ಸಿನಿಮಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿನಿಮಾದ ಮ್ಯೂಸಿಕ್ನ ಫೈನಲ್ ಟಚ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಹುಟ್ಟೂರು ಕುಂದಾಪುರದ ಬಸ್ರೂರಿನಲ್ಲಿ ನಡೆಯುತ್ತಿದೆ. ರಾಕಿ ಭಾಯ್ ಕೂಡ ತಮ್ಮ ಸಿನಿಮಾದ ಹಾಡುಗಳ ಫೈನಲ್ ಟಚ್ಗೆ ಆಗಮಿಸಿದ್ದು, ಬಿಡುವಿನ ವೇಳೆಯಲ್ಲಿ ಬಸ್ರೂರಿನ ಮೈದಾನದಲ್ಲಿ ಕ್ರಿಕೆಟ್ ಆಡ್ತಾ ಎಂಜಾಯ್ ಮಾಡಿದ್ದಾರೆ.
ಅಲ್ಲದೇ ತಮ್ಮ ಕೆಜಿಎಫ್ ಸಿನಿಮಾ ಯಶಸ್ಸಿಗಾಗಿ ಯಶ್ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡ್ತಾ ಇದ್ದು, ನಿನ್ನೆ ಉಡುಪಿಯ ಕುಂಬಾಶಿ ಆನೆಗುಡ್ಡೆ ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ದಿವಿನಾಯಕ ದರ್ಶನ ಪಡೆದರು. ಬಳಿಕ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ ಯಶ್, ದೇವಿಯಲ್ಲಿ ಕೆಜಿಎಫ್ 2 ಯಶಸ್ಸಿಗೆ ಪ್ರಾರ್ಥಿಸಿದ್ರು, ಇದೇ ವೇಳೆ ದೇಗುಲದ ವತಿಯಿಂದ ಯಶ್ ಅವರನ್ನು ಗೌರವಿಸಲಾಯಿತು.










