Monday, November 16, 2026
spot_imgspot_img
spot_imgspot_img

ಪುತ್ತೂರು: ಫೆ.6ರಂದು ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆ – ಚಿತ್ರಕೂಟದಲ್ಲಿ ನಾಗಪ್ರತಿಷ್ಠೆ

- Advertisement -
- Advertisement -

vtv vitla
vtv vitla

ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆ – ಚಿತ್ರಕೂಟದಲ್ಲಿ ನಾಗಪ್ರತಿಷ್ಠೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.6ರ ಭಾನುವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು:

03-02-2022ನೇ ಗುರುವಾರ ಬೆಳಿಗ್ಗೆ 9-00 ಗಂಟೆಗೆ ಪೆರ್ನೆ – ಬಿಳಿಯೂರು ಬಾರಿಕೆಗುತ್ತು ಜಾಗದಲ್ಲಿ ಸರ್ಪಸಂಸ್ಕಾರ ಪ್ರಾರಂಭ ಆಶ್ಲೇಷ ಬಲಿ ಪೂಜೆ, ಸ್ಥಳದ ನಾಗ ಸಾನಿಧ್ಯವನ್ನು ಸ್ವರ್ಣದ ನಾಗಪ್ರತಿಮೆಗೆ ಚೈತನ್ಯವನ್ನು ಆವಾಹನೆ ಮಾಡಿ ಅಲ್ಲಿಂದ ಬೆಳ್ಳಿಪ್ಪಾಡಿಗೆ ತರಲಾಗುವುದು.

05-02-2022ನೇ ಶನಿವಾರ ಸಾಯಂಕಾಲ 6-00 ಗಂಟೆಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಪ್ರಾಸಾದ ಸಂಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಾಕೋಘ್ನ ಹೋಮ, ವಾಸ್ತು ಹೋಮ ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ ಪ್ರಾಕಾರ ದಿಕ್ಷಲಿ, ಪ್ರಸಾದ ವಿತರಣೆ, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

06-02-2022ನೇ ರವಿವಾರ ಬೆಳಿಗ್ಗೆ ಗಂಟೆ 7-00ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ ಅಷ್ಟವಟು ಆರಾಧನೆ, ಪಂಚವಿಂಶತಿ ಸಾನಿಧ್ಯ ಕಲಶಪೂಜೆ,ಬೆಳಿಗ್ಗೆ ಗಂಟೆ 9-05ರಿಂದ 9-48ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ ಪಂಚಾಮೃತ ಅಭಿಷೇಕ, ಪಂಚವಿಶಂತಿ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!