Wednesday, July 29, 2026
spot_imgspot_img
spot_imgspot_img

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಜನೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ, ಕುಂಡಡ್ಕ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ಇದರ ಸಹಕಾರದೊಂದಿಗೆ ಭಜನೋತ್ಸವ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

vtv vitla
vtv vitla

ಬೆಳಗ್ಗೆ ಭಜನೋತ್ಸವದ ಉದ್ಘಾಟನೆಯನ್ನು ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಯುವಕವೃಂದದ ಅಧ್ಯಕ್ಷರಾದ ಯತೀಶ್ ಹಡೀಲು ಉಪಾಧ್ಯಕ್ಷರಾದ ಶೇಖರ್ ಪಿಲಿಂಜ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸುಮಾರು 12 ತಂಡಗಳು ಭಜನೋತ್ಸವದಲ್ಲಿ ಭಾಗವಹಿಸಿದ್ದವು. ಸಾಯಂಕಾಲ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಊರಪರವೂರ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು. ಯುವಕವೃಂದದ ಕಾರ್ಯದರ್ಶಿಯಾದ ಮನೋಜ್ ಕಂಪ, ಭಜನಾ ಸಮಿತಿಯ ಸಂಚಾಲಕರಾದ ಕಿರಣ್ ಎಣ್ಣೆದಕಲ, ಪೂಜಾ ಸಮಿತಿಯ ಸಂಚಾಲಕರಾದ ಗಿರೀಶ್ ಹಡೀಲು , ಸದಸ್ಯರಾದ ಜಿತೇಶ್ ಕೊಲ್ಯ, ಮನೋಹರ ಶೆಟ್ಟಿ ಜೈನರಕೋಡಿ, ಹೇಮಂತ್ ಪಿಲಿಪ್ಪೆ, ಕೀರ್ತನ್ ಮಾನಾಜೆಮೂಲೆ,ಮಹೇಶ್ ಕಂಪ,ಪ್ರವೀಣ್ ಹಡೀಲು, ಭರತ್ ಕಂಪ,ಹರೀಶ್ ಹಡೀಲು ಮೊದಲಾದವರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!