Sunday, September 27, 2026
spot_imgspot_img
spot_imgspot_img

ವಿಟ್ಲ: ಗೇಟ್‌ ಹಾಕಿ ರಸ್ತೆಯನ್ನು ಬಂದ್ ಮಾಡಿದ ವ್ಯಕ್ತಿ! ತೆರವುಗೊಳಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸೇಸಪ್ಪ ಬೆದ್ರಕಾಡು

- Advertisement -
- Advertisement -
vtv vitla
vtv vitla

ವಿಟ್ಲ ಕಸಬಾ ಗ್ರಾಮದ ಕೋಡಿ ಎಂಬಲ್ಲಿಗೆ ಹೋಗುವ ರಸ್ತೆಯನ್ನು ಹರೀಶ್ ಗೌಡ, ಎಂಬವರು ಗೇಟ್ ಹಾಕಿ ಬಂದ್ ಮಾಡಿರುವ ಬಗ್ಗೆ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ಇದರ ಸ್ಥಾಪಕ ಬಿ.ಕೆ. ಸೇಸಪ್ಪ ಬೆದ್ರಕಾಡು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ ಸಿ. ಆರ್ 46. 2020/21ರಂತೆ ಪರಿಶೀಲಿಸಿ ಕಸಬಾ ಗ್ರಾಮದ ಕೋಡಿ ಎಂಬಲ್ಲಿಗೆ ಹೋಗುವ ರಸ್ತೆಯನ್ನು ಹರೀಶ್‌ ಗೌಡ ಎಂಬವರು ಬಂದ್ ಮಾಡಿದ್ದು, ಈ ಬಗ್ಗೆ ಸರ್ವೆ ನಡೆಸಲಾಗಿರುತ್ತದೆ. ಹರೀಶ್ ಗೌಡ ಎಂಬವರಿಗೆ ಅಕ್ರಮ/ ಸಕ್ರಮದಲ್ಲಿ ಮಂಜೂರಾಗಿರುವುದು ಕಂಡು ಬರುತ್ತಿದ್ದು, ಆದರೂ ಈ ರಸ್ತೆಯನ್ನು ಬಂದ್ ಮಾಡುವ ಅಧಿಕಾರ ಯಾರಿಗೂ ಇಲ್ಲದಿರುವುದರಿಂದ ಕೂಡಲೇ ಹಾಕಿರುವ ಗೇಟ್‌ನ್ನು ತೆರವುಗೊಳಿಸುವುದು ಅನಿವಾರ್‍ಯವಾಗಿದೆ. ಒಂದು ವೇಳೆ ತೆರವುಗೊಳಿಸದೆ ಇದ್ದಲ್ಲಿ ಅಲ್ಲಿನ ಸಾರ್ವಜನಿಕರನ್ನು ಸೇರಿಸಿ ಪಂಚಾಯತ್ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ಇದರ ಸ್ಥಾಪಕ ಬಿ.ಕೆ. ಸೇಸಪ್ಪ ಬೆದ್ರಕಾಡು ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!